ಶಿಕ್ಷಣ ಕ್ಷೇತ್ರದಲ್ಲಿ ಹಲವು ಸವಾಲು

ಕೊಳ್ಳೇಗಾಲದಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಪ್ರಾಂಶುಪಾಲ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ.ಪುಟ್ಟಮಾದಪ್ಪ, ಎಸ್.ನಾಗರಾಜು, ಚೆನ್ನಮಾದೇಗೌಡ ಇತರರು ಇದ್ದರು.
ಕೊಳ್ಳೇಗಾಲದಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಪ್ರಾಂಶುಪಾಲ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ.ಪುಟ್ಟಮಾದಪ್ಪ, ಎಸ್.ನಾಗರಾಜು, ಚೆನ್ನಮಾದೇಗೌಡ ಇತರರು ಇದ್ದರು.
Published on
ಕೊಳ್ಳೇಗಾಲ: ಪಟ್ಟಣದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಭಾನುವಾರ ಶಿಕ್ಷಕರ ದಿನಾಚರಣೆ ಮತ್ತು ಅಭಿಯಂತರ ದಿನಾಚರಣೆ ಆಯೋಜಿಸಲಾಗಿತ್ತು.
ಕೊಳ್ಳೇಗಾಲ ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ.ಎಂ.ಪುಟ್ಟಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್‌ವಿಕೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ಶಿಕ್ಷಕರು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ಹಲವು ಸವಾಲುಗಳು ಎದುರಾಗಿದ್ದು, ಅವೆಲ್ಲವನ್ನೂ ಎದುರಿಸಿ ಶಿಕ್ಷಕರು ಕಾಯನಿರ್ವಹಿಸುತ್ತಿದ್ದಾರೆ ಎಂದರು.
ನಿವೃತ್ತ ಶಿಕ್ಷಕರಾದ ಟಿ.ವಿ.ಮಮತಾ, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್ ಹಾಗೂ ಆರ್ಕಿಟೆಕ್ಚರ್ ಇಂಜಿನಿಯರ್ ಉಷಾ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಲಯನ್ಸ್ ಕ್ಲಬ್‌ಗೆ ಆರ್.ದಿನೇಶ್ ಗುಪ್ತ, ಸಿ.ನಾಗೇಶ್ ಸೇರಿದರು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಸದಸ್ಯ ಜಿ.ಎಸ್.ಎಂ ಪ್ರಸಾದ್, ಕೊಳ್ಳೇಗಾಲ ಕಾರ್ಯದರ್ಶಿ ಲಯನ್ ಎಸ್. ನಾಗರಾಜು, ಖಂಜಾಚಿ ಬಿ.ಎನ್.ವಿರೂಪಾಕ್ಷಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಮಾದೇಶ್, ಲಯನ್ ಜಿಲ್ಲಾ ಸದಸ್ಯ ಚೆನ್ನಮಾದೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net