ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕನಿಗೆ ಜೈಲು

ಶಿಕ್ಷೆಗೆ ಗುರಿಯಾದ ವೆಂಕಟ ನಾರಾಯಣ
ಶಿಕ್ಷೆಗೆ ಗುರಿಯಾದ ವೆಂಕಟ ನಾರಾಯಣ
Published on

ಪ್ರಮುಖ ಮುಖ್ಯಾಂಶಗಳು

  • ಮಗುವಿಗೆ ನೀಡುವ ಆಹಾರ ಪದಾರ್ಥ
  • ಪಡೆಯಲು ಶಾಲೆಗೆ ಬಂದ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ
  • ಶಿಕ್ಷಕ
ಕೊಳ್ಳೇಗಾಲ: ಮಗುವಿಗೆ ನೀಡುವ ಆಹಾರ ಪದಾರ್ಥಗಳನ್ನು ಪಡೆಯಲು ಶಾಲೆಗೆ ಬಂದ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕನಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಸೆರೆವಾಸ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷಕ ವೆಂಕಟನಾರಾಯಣ ಶಿಕ್ಷೆಗೆ ಗುರಿಯಾದವನು. 2024 ನ.5 ರಂದು ಮದ್ಯಾಹ್ನ 12 ಗಂಟೆ ಸಮಯದಲ್ಲಿ ದೂರುದಾರೆ (ನೊಂದ ಮಹಿಳೆ) ತನ್ನ ಮಗನಿಗೆ ಶಾಲೆಯಿಂದ ನೀಡುವ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಕುರುಬರದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಬಂದಿದ್ದರು. ಈ ವೇಳೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೆಂಕಟ ನಾರಾಯಣ ಮಹಿಳೆಯನ್ನು ಪಕ್ಕದ ಕೊಠಡಿಯೊಳಗೆ ಹೋಗುವಂತೆ ಹೇಳಿ, ಕೊಠಡಿಯ ಬಾಗಿಲು ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ಆಕೆ ಕಿರುಚಿಕೊಂಡು ಹೊರ ಬಂದಿದ್ದಾರೆ.
ಈ ಸಂಬಂಧಪ್ರಕರಣ ದಾಖಲಿಸಿಕೊಂಡಿದ್ದ ರಾಮಾಪುರ ಪೋಲಿಸ್ ಠಾಣೆ ಪಿಎಸ್‌ಐ ಎಸ್.ಲೋಕೇಶ್ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆದಿದ್ದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು ವೆಂಕಟ ನಾರಾಯಣನಿಗೆ ಸೆರೆವಾಸ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಬಿ ಗಿರೀಶ್ ವಾದ ಮಂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net