ಕಾಡಾನೆ ಗ್ರಾಮದತ್ತ ಬಾರದಂತೆ ಕ್ರಮವಹಿಸಿ

ಆನಗೂಡು ಗ್ರಾಮದ ಬಳಿ ಕಾಣಿಸಿಕೊಂಡ ಕಾಡಾನೆ.
ಆನಗೂಡು ಗ್ರಾಮದ ಬಳಿ ಕಾಣಿಸಿಕೊಂಡ ಕಾಡಾನೆ.
Published on

ಪ್ರಮುಖ ಮುಖ್ಯಾಂಶಗಳು

  • ಆನಗೂಡು ಗ್ರಾಮಸ್ಥರಿಂದ ಒತ್ತಾಯ
ಹನೂರು: ತಾಲೂಕಿನ ಶ್ರೀಮಲೆ ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತದ ಆನಗೂಡು ಗ್ರಾಮದ ಬಳಿ ಆಗಮಿಸುತ್ತಿರುವ ಕಾಡಾನೆಗಳಿಗೆೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಯೊಂದು ಕಳೆದ ಒಂದು ವಾರದಿಂದ ಆಗಾಗ್ಗೆ ಗ್ರಾಮ ಸಮೀಪವೇ ಆಗಮಿಸುತ್ತಿದ್ದು, ಶುಕ್ರವಾರ ಆಗಮಿಸಿದ ಈ ಕಾಡಾನೆ ಜಮೀನುಗಳಲ್ಲಿ ಸುತ್ತಾಟ ನಡೆಸಿತು. ಇದರಿಂದ ಜನರಲ್ಲಿ ಭಯಭೀತಿಯನ್ನು ಉಂಟು ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಾಣಾಪಾಯ ಸಂಭವಿಸುವ ಮುನ್ನ ಕಾಡಾನೆ ಗ್ರಾಮದತ್ತ ಬಾರದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net