ಕಣ್ಣಿನ ಆರೋಗ್ಯಕ್ಕೆ ಕಾಳಜಿ ವಹಿಸಿರಿ

ಕೊಳ್ಳೇಗಾಲದ ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರಕ್ಕೆ ಪುಟ್ಟಮಾದಪ್ಪ ಚಾಲನೆ ನೀಡಿದರು. ಎಸ್.ನಾಗ ರಾಜು, ಜಿ.ಎಸ್.ಮಹದೇವ ಪ್ರಸಾದ್, ಚನ್ನಮಾದೇಗೌಡ, ವಿರೂಪಾಕ್ಷ ಸ್ವಾಮಿ, ಆನಂದ ರಾಮ ಶೆಟ್ಟಿ ಇದ್ದರು.
ಕೊಳ್ಳೇಗಾಲದ ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರಕ್ಕೆ ಪುಟ್ಟಮಾದಪ್ಪ ಚಾಲನೆ ನೀಡಿದರು. ಎಸ್.ನಾಗ ರಾಜು, ಜಿ.ಎಸ್.ಮಹದೇವ ಪ್ರಸಾದ್, ಚನ್ನಮಾದೇಗೌಡ, ವಿರೂಪಾಕ್ಷ ಸ್ವಾಮಿ, ಆನಂದ ರಾಮ ಶೆಟ್ಟಿ ಇದ್ದರು.
Published on

ಕೊಳ್ಳೇಗಾಲ:

ಪಟ್ಟಣದ ಲಯನ್ಸ್ ಕ್ಲಬ್ನಲ್ಲಿ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ ವೆಸ್ಟ್ ಕಣ್ಣಿನ ಆಸ್ಪತ್ರೆ ವ್ಯೆದ್ಯೆ ಡಾ.ನಯನಾ, ಕಣ್ಣು ಅಮೂಲ್ಯವಾದದ್ದು. ಕಣ್ಣಿನ ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ. ಹೊಗೆ, ಧೂಳಿನಿಂದ ದೂರವಿರುವುದರ ಜತೆಗೆ ಅತಿಯಾಗಿ ಟಿವಿ, ಮೊಬೈಲ್ ವೀಕ್ಷಿಸಬಾರದು. ಕಣ್ಣನ್ನು ಆಗಾಗ ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಲಯನ್ ಕ್ಲಬ್ ಅಧ್ಯಕ್ಷ ಬಿ.ಎಂ.ಪುಟ್ಟಮಾದಪ್ಪ ಮಾತನಾಡಿ, ಶಿಬಿರದಲ್ಲಿ 42 ಜನರು ತಪಾಸಣೆಗೆ ಒಳಪಟ್ಟಿದ್ದು 22 ಜನರನ್ನು ಶಸ್ತ್ರ ಚಿಕಿತ್ಸೆಗೆಂದು ಬೆಂಗಳೂರಿನ ಲಯನ್ ವೆಸ್ಟ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುಟ್ಟಮಾದಪ್ಪ, ಕಾರ್ಯದರ್ಶಿ ಲಯನ್ ಎಸ್.ನಾಗರಾಜು, ನಿಕಟ ಪೂರ್ವ ಅಧ್ಯಕ್ಷ ಮಾದೇಶ್, ಜಿ.ಎಸ್.ಮಹದೇವ ಪ್ರಸಾದ್, ಲಯನ್ ಚನ್ನಮಾದೇಗೌಡ, ವಿರೂಪಾಕ್ಷ ಸ್ವಾಮಿ, ಆನಂದ ರಾಮ ಶೆಟ್ಟಿ, ಬಸವ ಲಿಂಗಪ್ಪ, ಸುಂದರಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net