ಕಣ್ಣಿನ ಆರೋಗ್ಯದತ್ತ ಕಾಳಜಿ ವಹಿಸಿ

ಕೊಳ್ಳೇಗಾಲದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ಕೊಳ್ಳೇಗಾಲ ವತಿಯಿಂದ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ವೈದ್ಯರು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ತಪಾಸಣೆಗೆ ಒಳಪಡಿಸಿದರು.
ಕೊಳ್ಳೇಗಾಲದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ಕೊಳ್ಳೇಗಾಲ ವತಿಯಿಂದ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ವೈದ್ಯರು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ತಪಾಸಣೆಗೆ ಒಳಪಡಿಸಿದರು.
Published on
ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ಕೊಳ್ಳೇಗಾಲ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರಕ್ಕೆ ಬೆಂಗಳೂರು ಲಯನ್ಸ್ ವೆಸ್ಟ್ ಹೈ ಹಾಸ್ಪಿಟಲ್‌ನ ವೈದ್ಯ ಡಾ.ಪ್ರಾನ್ಸು ಜೋಶಿ ಚಾಲನೆ ನೀಡಿ ಮಾತನಾಡಿ, ದೇಹದ ಅಂಗಾಗಳಲ್ಲಿ ಕಣ್ಣು ಸೂಕ್ಷ್ಮವಾದ ಅಂಗವಾಗಿದೆ. ಹಾಗಾಗಿ ಕಣ್ಣಿನ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ. ಪ್ರಸ್ತುತ ಮಕ್ಕಳು ಟಿವಿ, ಮೊಬೈಲ್ ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಪಾಲಕರು ಅದನ್ನು ಗಮನಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ 64 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಇವರಲ್ಲಿ 54 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚೆನ್ನಮಾದೇಗೌಡ ಮಾತನಾಡಿ, ಲಯನ್ಸ್ ಕ್ಲಬ್ ಕೊಳ್ಳೇಗಾಲ ನಡೆಸಿರುವ 249 ಕ್ಯಾಂಪ್‌ಗಳಲ್ಲಿ 1,12,956 ಜನರನ್ನು ತಪಾಸಣೆಗೆ ಒಳಪಡಿಸಿದ್ದು. ಇವರಲ್ಲಿ 11,180 ಜನರು ಶಸ್ತ್ರಚಿಕಿತ್ಸೆಯ ಅನುಕೂಲ ಪಡೆದಿದ್ದಾರೆ. ಹೀಗೆ ನಿರಂತರವಾಗಿ ಸಂಸ್ಥೆ ಸಮಾಜ ಮುಖಿ ಕಾರ್ಯಗಳನ್ನು ನಡೆಸುತ್ತಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಮಾಜಿ ಅಧ್ಯಕ್ಷ ಎಸ್.ನಾಗರಾಜು, ಪುಟ್ಟಮಾದಪ್ಪ, ಚಿಕ್ಕಬಸವಯ್ಯ, ವೆಂಕಟೇಶ್‌ಬಾಬು, ಆನಂದರಾಮ ಶೆಟ್ಟಿ, ಎ.ಸತೀಶ್, ಖಜಾಂಚಿ ಮಹದೇವಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net