ಜಲ ಸಂರಕ್ಷಣೆಯಿಂದ ಸುಸ್ಥಿರ ಕೃಷಿ ಸಾಧ್ಯ

 ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ  ಇತ್ತೀಚೆಗೆ ಆಯೋಜಿಸಿದ್ದ ಜಲ ದಿನಾಚರಣೆ ಕಾರ್ಯಕ್ರಮವನ್ನು ಮಂಡ್ಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ಉದ್ಘಾಟಿಸಿದರು. ಡಾ.ಜಿ.ಎಂ.ದೇವಗಿರಿ, ಡಾ.ರಾಮಚಂದ್ರ, ಡಾ.ಬಿ.ಎಸ್.ಬಸವರಾಜ್, ಎನ್.ಕೇಶವಮೂರ್ತಿ ಇತರರು ಹಾಜರಿದ್ದರು.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಲ ದಿನಾಚರಣೆ ಕಾರ್ಯಕ್ರಮವನ್ನು ಮಂಡ್ಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ಉದ್ಘಾಟಿಸಿದರು. ಡಾ.ಜಿ.ಎಂ.ದೇವಗಿರಿ, ಡಾ.ರಾಮಚಂದ್ರ, ಡಾ.ಬಿ.ಎಸ್.ಬಸವರಾಜ್, ಎನ್.ಕೇಶವಮೂರ್ತಿ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಲ ಸಂರಕ್ಷಣೆ ಮತ್ತು ಸುಸ್ಥಿತ ಕೃಷಿ ಮಹತ್ವ ತಿಳಿಸುವ ಕಾರ್ಯಕ್ರಮ
  • ಜಿಲ್ಲೆಯ ವಿವಿಧ ಭಾಗಗಳ ರೈತರು ಭಾಗಿ
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಮತ್ತು ಸುಸ್ಥಿತ ಕೃಷಿ ಮಹತ್ವವನ್ನು ರೈತರಿಗೆ ತಿಳಿಸಲಾಯಿತು.
ಮಂಡ್ಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ರೈತರಿಗೆ ಉಪಯುಕ್ತ ಕೃಷಿ ಜ್ಞಾನವನ್ನು ಹಂಚುವ ಉದ್ದೇಶದಿಂದ ‘ಕೃಷಿ ದೀವಿಗೆ’ ಎಂಬ ಆಕಾಶವಾಣಿ ಕಾರ್ಯಕ್ರಮಗಳ ಸರಣಿಯ ಅಧಿಕೃತ ಉದ್ಘಾಟನೆಯೂ ನೆರವೇರಿತು. ಈ ಸಂದರ್ಭದಲ್ಲಿ ತರಕಾರಿ ಬೆಳೆಗಳಲ್ಲಿ ಹನಿ ನೀರಾವರಿ ವಿಧಾನ ಕುರಿತು ತಿಳಿಸಕೊಡಲಾಯಿತು. ನೀರಿನ ನಿರ್ವಹಣೆ, ಬೆಳೆ ಉತ್ಪಾದಕತೆ ಹೆಚ್ಚಿಸುವುದು ಹಾಗೂ ಆಧುನಿಕ ಹನಿ ನೀರಾವರಿ ತಂತ್ರಜ್ಞಾನಗಳನ್ನು ರೈತರಲ್ಲಿ ಪ್ರೋತ್ಸಾಹಿಸುವ ಬಗ್ಗೆ ವಿವರಿಸಲಾಯಿತು.
ಭಾಗವಹಿಸಿದ ರೈತರು ಹನಿ ನೀರಾವರಿ ವ್ಯವಸ್ಥೆಯ ಅಳವಡಿಕೆ, ನಿರ್ವಹಣೆ ಮತ್ತು ಅದರ ಪ್ರಯೋಜನಗಳ ಕುರಿತು ಪ್ರಾಯೋಗಿಕ ತಿಳುವಳಿಕೆಯನ್ನು ಪಡೆದುಕೊಂಡರು. ವಿಶೇಷವಾಗಿ ನೀರಿನ ಕೊರತೆಯ ಸಂದರ್ಭದಲ್ಲಿನ ಅದರ ಮಹತ್ವವನ್ನು ವಿವರಿಸಲಾಯಿತು. ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ನಿಯಂತ್ರಣ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವ ಕೃಷಿ ಪದ್ಧತಿ, ರೈತರಿಗೆ ನವೀನ ಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒದಗಿಸುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಹಾಸನ ಮತ್ತು ಮಂಡ್ಯ ಸೇರಿದಂತೆ ಸಮೀಪದ ಜಿಲ್ಲೆಗಳಿಂದ ರೈತರು ಉತ್ಸಾಹದಿಂದ ಭಾಗವಹಿಸಿದರು. ಮಂಡ್ಯ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಜಿ.ಎಂ. ದೇವಗಿರಿ, ವಿಸ್ತರಣಾ ನಿರ್ದೇಶಕ ಡಾ. ರಾಮಚಂದ್ರ, ಸಹ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಬಸವರಾಜ್, ಆಕಾಶವಾಣಿ ಮೈಸೂರು ಕಾರ್ಯಕ್ರಮ ಸಂಯೋಜಕ ಎನ್.ಕೇಶವಮೂರ್ತಿ ಮತ್ತು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ವಿಜ್ಞಾನಿಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net