ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ

ಪುದುನಗರ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದರು. ಚಿಕ್ಕರಾಜಶೆಟ್ಟಿ, ಲೋಕೇಶ್ ಹಾಗೂ ಸಿಬ್ಬಂದಿ ಇದ್ದರು.
ಪುದುನಗರ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದರು. ಚಿಕ್ಕರಾಜಶೆಟ್ಟಿ, ಲೋಕೇಶ್ ಹಾಗೂ ಸಿಬ್ಬಂದಿ ಇದ್ದರು.
Published on
ಹನೂರು: ತಾಲೂಕಿನ ಪುದುನಗರ ಗ್ರಾಮದ ಜಮೀನೊಂದರ ಮೇಲೆ ಗುರುವಾರ ದಾಳಿ ನಡೆಸಿದ ಪೋಲಿಸರು ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಪುದುನಗರದಲ್ಲಿ ಹಾಲಿ ವಾಸವಿರುವ ದೊಮ್ಮನಗದ್ದೆ ಗ್ರಾಮದ ನಾಗರಾಜು (45) ಬಂಧಿತ ಆರೋಪಿ. ಈತ ಪುದುನಗರ ಹೊರವಲಯದಲ್ಲಿನ ಉಡುತೊರೆ ಹಳ್ಳ ಜಲಾಶಯದ ಸಮೀಪದಲ್ಲಿ ಜಮೀನನ್ನು ಹೊಂದಿದ್ದು, ಕೃಷಿಯ ಜತೆಗೆ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಸ್ಪಿ ಡಾ.ಬಿ.ಟಿ ಕವಿತಾ, ಎಎಸ್ಪಿ ಶಶಿಧರ್ ಹಾಗೂ ಡಿವೈಎಸ್ಪಿ ಧರ್ಮೇಂದ್ರ ಇವರ ಮಾರ್ಗದರ್ಶನದಲ್ಲಿ ರಾಮಾಪುರ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಹಾಗೂ ಸಿಬ್ಬಂದಿ ತಂಡ ಜಮೀನಿನ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾ ಬೆಳೆದಿರುವುದು ದೃಢಪಟ್ಟಿದೆ. ಒಟ್ಟು 20 ಕೆ.ಜಿ 500 ಗ್ರಾಂ ತೂಕವುಳ್ಳ 20 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಪಿಎಸ್‌ಐ ಲೋಕೇಶ್, ಸಿಬ್ಬಂದಿ ಮಹೇಂದ್ರ, ರಘು, ರಾಜು, ಅಮಗೊಂಡ ಬಿರಾದಾರ, ಲಿಯಾಖತ್ ಆಲಿಖಾನ್ ಹಾಗೂ ರಾಮಪ್ಪ ಹಕ್ಕಲ್ ಭಾಗಿಯಾಗಿದ್ದರು. ಈ ಕಾರ್ಯಕ್ಕೆ ಎಸ್ಪಿ ಡಾ.ಬಿ.ಟಿ ಕವಿತಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net