ಇನ್ನು ಜಿಲ್ಲೆಯಲ್ಲಿ ಜೋಳವನ್ನು ಚಾಮರಾಜನಗರ ತಾಲೂಕಿನಲ್ಲಿ 1130 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 6800 ಹೆಕ್ಟೇರ್, ಯಳಂದೂರು ತಾಲೂಕಿನಲ್ಲಿ 125 ಹೆಕ್ಟೇರ್ ಪ್ರದೇಶಗಳಲ್ಲಿ ಜೋಳ ಹಾಕಲಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಸೂರ್ಯಕಾಂತಿ ಮತ್ತು ಜೋಳವನ್ನು ಬೆಳೆಯಲಾಗಿದೆ. ಮಳೆ ಮಾಹಿತಿ ಪ್ರಕಾರ, ಜು.4ವರೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ.6.2ರಷ್ಟು ಮಳೆಯಾಗಿದೆ. ಆದರೆ ಜೂನ್‌ನಲ್ಲಿ 42.4, ಮೇನಲ್ಲಿ 23.4, ಏಪ್ರಿಲ್‌ನಲ್ಲಿ 45.8ರಷ್ಟು ಮಳೆ ಕೊರತೆ ಉಂಟಾಗಿತ್ತು.