ಕಠಿಣ ತರಬೇತಿಯಿಂದ ಯಶಸ್ಸು ಸಾಧ್ಯ

ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಖೋಖೋ ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿನಂದನೆ ಸಲ್ಲಿಸಿದರು. ಡಾ.ಶಾಂತರಾಜು, ಜಿ.ಬಂಗಾರು, ಜಿ.ಮಹಾದೇವಸ್ವಾಮಿ, ಎನ್.ಸಂದೀಪ್, ಪಿ.ಯೋಗೇಶ್, ಎಲ್.ಚೇತನ್‌ಕುಮಾರ್, ಎನ್.ಕಾರ್ತೀಕ್, ಮನೋಜ್, ಪ್ರೀತಮ್, ಪ್ರಜ್ವಲ್ ಇನ್ನಿತರರಿದ್ದರು.
ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಖೋಖೋ ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿನಂದನೆ ಸಲ್ಲಿಸಿದರು. ಡಾ.ಶಾಂತರಾಜು, ಜಿ.ಬಂಗಾರು, ಜಿ.ಮಹಾದೇವಸ್ವಾಮಿ, ಎನ್.ಸಂದೀಪ್, ಪಿ.ಯೋಗೇಶ್, ಎಲ್.ಚೇತನ್‌ಕುಮಾರ್, ಎನ್.ಕಾರ್ತೀಕ್, ಮನೋಜ್, ಪ್ರೀತಮ್, ಪ್ರಜ್ವಲ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಾ.ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಸಲಹೆ
  • ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಭಿನಂದನೆ
  • ವಿವಿಧ ಕ್ರೀಡಾಕೂಟಗಳಲ್ಲಿ ಈವರಗೆ 11 ತಂಡಗಳು ಭಾಗಿ
ಚಾಮರಾಜನಗರ: ಕಠಿಣ ತರಬೇತಿ ಮತ್ತು ಏಕಾಗ್ರತೆಯಿಂದ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
2026 ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟವು ಮಾ.26 ರಿಂದ ಮಾ.29 ರವರೆಗೆ ದಾವಣಗೆರೆಯಲ್ಲಿ ಪುರುಷರ ಖೋಖೋ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ವಿಶ್ವವಿದ್ಯಾಲಯದ ವತಿಯಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತನ್ನಿ ಎಂದು ಹಾರೈಸಿದರು.
ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದರೇ, ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಕಠಿಣ ಶ್ರಮದಿಂದ ತರಬೇತಿ ಪಡೆದುಕೊಂಡವರು ಯಶಸ್ಸು ಸಾಧಿಸುತ್ತಾರೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಶಾಂತರಾಜು ಮಾತನಾಡಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ವಿವಿಧ ಕ್ರೀಡಾಕೂಟಗಳಲ್ಲಿ ಈವರಗೆ 11 ತಂಡಗಳು ಭಾಗವಹಿಸಿದೆ. ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಕ್ರೀಡಾ ಸಮಿತಿ ಸದಸ್ಯ ಜಿ.ಬಂಗಾರು, ತಂಡದ ನಾಯಕ ಜಿ.ಮಹಾದೇವಸ್ವಾಮಿ, ಕ್ರೀಡಾಪಟುಗಳಾದಎನ್.ಸಂದೀಪ್, ಪಿ.ಯೋಗೇಶ್, ಎಲ್.ಚೇತನ್‌ಕುಮಾರ್, ಎನ್.ಕಾರ್ತೀಕ್, ಮನೋಜ್, ಪ್ರೀತಮ್, ಪ್ರಜ್ವಲ್, ಕಾರ್ತೀಕ್, ಈಶ್ವರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net