ಕಠಿಣ ಶ್ರಮ ಹಾಕಿದರಷ್ಟೇ ಯಶಸ್ಸು ಸಾಧ್ಯ

 ಚಾಮರಾಜನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಭರವಸೆಯ ಹೆಜ್ಜೆ  ಶೀರ್ಷಿಕೆಯ ಬದುಕಿನ ಸಾಧ್ಯತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಡಿಸಿ ಶ್ರೀರೂಪಾ  ಉದ್ಘಾಟಿಸಿದರು. ಎನ್.ವಿಶ್ವನಾಥ, ಲಿಂಗರಾಜು, ಎನ್.ಮುನಿರಾಜು, ಶರಣ್ಯ, ದೀಪಕ್, ಬಸವರಾಜ್ ಇತರರು ಹಾಜರಿದ್ದರು.
ಚಾಮರಾಜನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಭರವಸೆಯ ಹೆಜ್ಜೆ ಶೀರ್ಷಿಕೆಯ ಬದುಕಿನ ಸಾಧ್ಯತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಡಿಸಿ ಶ್ರೀರೂಪಾ ಉದ್ಘಾಟಿಸಿದರು. ಎನ್.ವಿಶ್ವನಾಥ, ಲಿಂಗರಾಜು, ಎನ್.ಮುನಿರಾಜು, ಶರಣ್ಯ, ದೀಪಕ್, ಬಸವರಾಜ್ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಕಾರ್ಯಾಗಾರ
  • ಡಿಸಿ ಶ್ರೀರೂಪಾ ಅವರಿಂದ ಕಾರ್ಯಕ್ರಮ ಉದ್ಘಾಟನೆ
ಚಾಮರಾಜನಗರ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಸಮನ್ವಯ ಟ್ರಸ್ಟ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭರವಸೆಯ ಹೆಜ್ಜೆ ಶೀರ್ಷಿಕೆಯ ಬದುಕಿನ ಸಾಧ್ಯತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭರವಸೆಯ ಹೆಜ್ಜೆ ಕಾರ್ಯಕ್ರಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬೇಕು. ಜಿಲ್ಲೆಗೆ ಒಂದು ಐತಿಹಾಸಿಕ ದಿನ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಈ ಹಿಂದೆ ಜಿಲ್ಲಾಡಳಿತದ ವತಿಯಿಂದ ಅಭ್ಯುದಯ ಎಂದು ಒಂದು ಕಾರ್ಯಕ್ರಮ ಮಾಡುತ್ತಿದ್ದೇವು ಇಂಡಿಯಾ ಫಾರ್ ಐಎಎಸ್ ಅವರೊಂದಿಗೆ ಸೇರಿ ನಮ್ಮ ಚಾಮರಾಜನಗರದ ಜನತೆ ಬರೀ ಭೌಗೋಳಿಕವಾಗಿಲ್ಲದೇ ಭೌತಿಕವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಕಾರ್ಯಕ್ರಮ ರೂಪಿಸಿದ್ದು, ಮುಂದುವರಿಯುತ್ತಿದೆ ಎಂದರು.
ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗೆಂದು ಜೀವನದ ಭರವಸೆಯನ್ನು ಕಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಭರವಸೆಯ ಬೆಳಕು ವಿಭಿನ್ನ ಕಾರ್ಯಕ್ರಮವನ್ನು ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ಮೂರು ತಿಂಗಳೊಮ್ಮೆ ಇಂತಹ ಕಾರ್ಯಕ್ರಮ ರೂಪಿಸಿದರೆ ಯುವಜನತೆಯಲ್ಲಿ ಬೆಳೆವಣಿಗೆ ಆಗುತ್ತದೆ. ಜಿಲ್ಲೆಯು ಹಿಂದುಳಿದ ಜಿಲ್ಲೆಯಲ್ಲ. ಜಿಲ್ಲೆಯಲ್ಲಿ ಸಾಕಷ್ಟು ತುಂಬ ಬುದ್ಧಿವಂತರು ಇದ್ದಾರೆ. ನಾನು ಸಾಕಷ್ಟು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿಸಿದ್ದೇನೆ. ಅವರ ಚಿಂತನೆಗಳು, ಜೀವನದ ಗುರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಸಮನ್ವಯ ಟ್ರಸ್ಟ್ ಸರಿಯಾದ ಮಾರ್ಗದರ್ಶನ ನೀಡಿ ಉನ್ನತ ಮಟ್ಟಕ್ಕೆ ಹೋಗಲು ಸಹಾಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕರ್ನಾಟಕ ಗೃಹ ಮಂಡಳಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ ಕೆ.ಎ.ದಯಾನಂದ ಮಾತನಾಡಿ, ಸಮನ್ವಯ ಟ್ರಸ್ಟ್‌ನಡಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಸರ್ಕಾರಿ ಶಾಲೆಯಲ್ಲಿ ಓದಿದ್ದ, ಇಂಗ್ಲೀಷ್ ಬರಲ್ಲ ಈ ರೀತಿಯ ಕೀಳಿರಿಮೆ ಇರುವ ವಿದ್ಯಾರ್ಥಿಗಳಿಗೆ ಒಂದು ಆತ್ಮ ವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಭರವಸೆ ಹೆಜ್ಜೆ ಹೆಸರಿನಲ್ಲಿ ಬದುಕಿನ ಸಾಧ್ಯತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಮಾಡುತ್ತಾ ಬರಲಾಗುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರು, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪೂರಕವಾದಂತಹ ಒಂದು ಸಕಾರಾತ್ಮಕ ಮನಸ್ಥಿತಿ ರೂಢಿಸಿಕೊಳ್ಳಲು ನಿರಂತರವಾಗಿ ಇಂತಹ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗಿದೆ. ಅಲ್ಲದೆ ಯುಪಿಎಸ್‌ಸಿ, ಕೆಪಿಎಸ್‌ಸಿಯಲ್ಲಿ ಏನು ಓದಬೇಕು ಎಂದು ಮಾಹಿತಿ ಕೊಡುತ್ತಾ ಬಂದಿದ್ದೇವೆ ಎಂದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ವಿಶ್ವನಾಥ, ತಾಲೂಕು ಅಧಿಕಾರಿ ಲಿಂಗರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್.ಮುನಿರಾಜು, ಸಂಪನ್ಮೂಲ ವ್ಯಕ್ತಿಗಳಾದ ಶರಣ್ಯ, ದೀಪಕ್, ಬಸವರಾಜ್ ಮತ್ತು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net