ನೂರಕ್ಕೆ ನೂರು ಫಲಿತಾಂಶ ಪಡೆಯಲು ಶ್ರಮಿಸಿ

ಕೊಳ್ಳೇಗಾಲ ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶವೃದ್ಧಿಗಾಗಿ ಪ್ರೇರಣಾ ಕಾರ್ಯಾಗಾರ ಸಾಧನ ಪಥ 100ರ ಗುರಿಯತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ಮಂಜುಳಾ, ಗುರುಶಾಂತಪ್ಪ ಬೆಳ್ಳುಂಗಡಿ, ಮಹದೇವ ಕುಮಾರ್, ಅಲೆಕ್ಸಾಂಡರ್, ಚಿಕ್ಕರಾಜು, ಹರೀಶ್ ಮತ್ತಿತರಿದ್ದರು.
ಕೊಳ್ಳೇಗಾಲ ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶವೃದ್ಧಿಗಾಗಿ ಪ್ರೇರಣಾ ಕಾರ್ಯಾಗಾರ ಸಾಧನ ಪಥ 100ರ ಗುರಿಯತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ಮಂಜುಳಾ, ಗುರುಶಾಂತಪ್ಪ ಬೆಳ್ಳುಂಗಡಿ, ಮಹದೇವ ಕುಮಾರ್, ಅಲೆಕ್ಸಾಂಡರ್, ಚಿಕ್ಕರಾಜು, ಹರೀಶ್ ಮತ್ತಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಸಲಹೆ
  • ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶೇ. 100ರ ಫಲಿತಾಂಶ ಗುರಿ ಹೊಂದಿ ಸಾಧನೆಯತ್ತ ಸಾಗಬೇಕು ಎಂದು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಹೇಳಿದರು.
ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ವಿಷಯ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಗಾಗಿ ಪ್ರೇರಣಾ ಕಾರ್ಯಾಗಾರ ಸಾಧನ ಪಥ 100ರ ಗುರಿಯತ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಎರಡು ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ಬರೆದಿದ್ದೀರಿ. ಇವೆರಡು ಪರೀಕ್ಷೆಯನ್ನು ಅವಲೋಕಿಸಿಕೊಳ್ಳುವ ಸಮಯ ಇದಾಗಿದ್ದು, ಎ ಶ್ರೇಣಿ ಮತ್ತು ಎ ಪ್ಲಸ್ ಪಡೆದವರು 100ರ ಗುರಿ ಮುಟ್ಟಲು ಎಷ್ಟು ಅಂಕಗಳನ್ನು ಕಳೆದುಕೊಂಡಿದ್ದೀರಿ, ಎಲ್ಲಿ ಎಡವಿದ್ದೀರಿ, ವಿಷಯವಾರು ನಿಮಗಿರುವ ಕ್ಲಿಷ್ಠಾಂಶಗಳನ್ನು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹರಿಸಿಕೊಳ್ಳಬೇಕು. ಮುಂಬುವರ ಮೂರನೇ ಪೂರ್ವ ಸಿದ್ಧತೆ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಪಡೆದುಕೊಳ್ಳಬೇಕು. ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಗುಣಾತ್ಮಕ ಫಲಿತಾಂಶವನ್ನು ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ತಮಗೆ ದೊರೆತಿರುವ ಇಂಟರ್‌ನಲ್ಸ್ ಮಾರ್ಕ್ಸ್‌ಗಳ ಮಾಹಿತಿ ಈಗಾಗಲೇ ತಿಳಿದಿದೆ. ವಾರ್ಷಿಕ ಪರೀಕ್ಷೆ ಮಾ.18 ನಿಗದಿಗೊಂಡಿದೆ. ನೂರಕ್ಕೆ ನೂರು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಬಳಸಿಕೊಳ್ಳಬೇಕು. ವಿಷಯವಾರು ಗೊಂದಲ, ಸಮಸ್ಯೆಗಳಿದ್ದರೆ ವ್ಯಕ್ತಿಗಳಿಂದ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತಮ ಅಂಕಗಳಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಆರ್‌ಸಿ ಮಹದೇವ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಕಾರ್ಯದರ್ಶಿ ಚಿಕ್ಕರಾಜು, ಉಪಾಧ್ಯಕ್ಷ ಹರೀಶ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ್, ದೈಹಿಕ ಪರಿವೀಕ್ಷಕ ಉಮಾಶಂಕರ್, ಇಸಿಒ ವಿಜಯಕುಮಾರ್, ಅಸ್ಸಿಸಿ ಶಾಲೆಯ ಮುಖ್ಯಶಿಕ್ಷಕ ಇಗ್ನಾಸಿ ಮುತ್ತು, ವಿಷಯ ಶಿಕ್ಷಕರು ಮತ್ತಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net