

ಹನೂರು:
ಕತ್ತಲೆ ರಾಜ್ಯದಲ್ಲಿದ್ದ ಅಜ್ಞಾನ, ಅನಾಗರಿಕತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಿದವರು ಪವಾಡ ಪುರುಷ ಶ್ರೀ ಮಹದೇಶ್ವರರು ಎಂದು ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಶ್ರೀ ಮಹದೇಶ್ವರರು ನೆಲೆಸಿರುವ ಈ ಸ್ಥಳ ಸಾಮಾನ್ಯವಾದುದಲ್ಲ. ಕಲ್ಯಾಣ ರಾಜ್ಯದ ಹಲವು ಶರಣರು ಈ ಭಾಗಕ್ಕೆ ಆಗಮಿಸಿರುವುದಕ್ಕೆ ಗ್ರಾಮಗಳಲ್ಲಿನ ಕುರುಹುಗಳು ಸಾಕ್ಷಿಯಾಗಿವೆ ಎಂದರು.
ಬಳಿಕ ಶ್ರೀ ಗುರುಮಲ್ಲೇಶ್ವರರು, ಶ್ರೀ ಕಂಬಳೀಶ್ವರರು ಮತ್ತು ಶ್ರೀ ಕೆಂಡಗಣ್ಣ ಸ್ವಾಮೀಜಿ ಅವರ ಜೀವನ ಮತ್ತು ಸಾಹಿತ್ಯ ಕುರಿತ 3ನೇ ಗೋಷ್ಠಿಯಲ್ಲಿ ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಉಪನ್ಯಾಸ ನೀಡಿದರು. ಬಳಿಕ ಸಮಾಜ ಸೇವೆ ಮತ್ತು ಆಧ್ಯಾತ್ಮ ಸಾಧನೆ ಹಾಗೂ ಮಠಾಧಿಪತಿಗಳ ಜೀವನ ಸಮನ್ವಯ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ವಿವಿಧ ಶ್ರೀಗಳು ಮಾಹಿತಿ ಹಂಚಿಕೊಂಡರು. ಇದೇ ವೇಳೆ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಶ್ರೀಗಳು ಶ್ರೀ ಮಹದೇಶ್ವರ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.