ಶಿಬಿರಕ್ಕೆ ನಗರದ ವಿರಕ್ತ ಮಠದ ಪೀಠಾಧಿಪತಿ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀಮುಘರಾಜೇಂದ್ರ ಮಹಾಸಂಸ್ಥಾನ ಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ಹಿಮೋಗ್ಲೋಬಿನ್ ಪರೀಕ್ಷೆ, ಅನಿಮಿಯಾ ತಪಾಸಣೆ ಮಾಡಲಾಯಿತು. ಒಟ್ಟು 1012 ಜನರು ಪರೀಕ್ಷೆಗೊಳಪಟ್ಟರು. ಹಿಮೋಗ್ಲೋಬಿನ್ ಕಡಿಮೆ ಇದ್ದ 500 ಜನರಿಗೆ ಸೂಕ್ತ ಔಷಧಿ ನೀಡಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯನಿರ್ದೇಶಕ ಎಚ್.ಎಸ್.ಮಹದೇವಸ್ವಾಮಿ, ದೊಡ್ಡರಾಯಪೇಟೆ ಗಿರೀಶ್, ಸಹಕಾರಿ ಸಂಘದ ಅಧ್ಯಕ್ಷ ರಾಮಸಮುದ್ರ ಬಾಬು, ಚೈತನ್ಯ ನೆಟ್‌ವರ್ಕ್‌ನ ಮುಖ್ಯಸ್ಥೆ ಭಾಗ್ಯ, ನಿರ್ವಾಹಕ ಮಹೇಶ್, ಗುರುಸ್ವಾಮಿ, ಮಂಜುನಾಥ್ (ಇಂಚರ ಹೋಟೇಲ್), ಸಿದ್ದಮಲ್ಲಪ್ಪ, ಆರ್.ಎಂ.ಸ್ವಾಮಿ, ಕೊಡಸೋಗೆ ಸಿದ್ದಬಸಪ್ಪ, ಕೋಡಿಮೋಳೆ ರಾಜಶೇಖರ್ ಮತ್ತು ಭಕ್ತರು ಇದ್ದರು.