ಪ್ರತಿಯೊಂದು ಕ್ಷೇತ್ರದಲ್ಲೂ ಸೀಯರ ಸಾಧನೆ

ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಡಿವೈಎಸ್ಪಿ ಸ್ನೇಹಾರಾಜ್ ಉದ್ಘಾಟಿಸಿದರು. ಡಾ.ಕೆ.ಎಸ್.ಲಲಿತಾ ಭಾಯಿ, ಎಂ.ಅಶ್ವಿನಿ, ಡಾ.ಕೆ.ಎಂ.ನಾಗೇಶ್ ಇತರರಿದ್ದರು.
ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಡಿವೈಎಸ್ಪಿ ಸ್ನೇಹಾರಾಜ್ ಉದ್ಘಾಟಿಸಿದರು. ಡಾ.ಕೆ.ಎಸ್.ಲಲಿತಾ ಭಾಯಿ, ಎಂ.ಅಶ್ವಿನಿ, ಡಾ.ಕೆ.ಎಂ.ನಾಗೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಸ್ನೇಹಾರಾಜ್ ಅಭಿಪ್ರಾಯ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
  • ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜನೆ
ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಮೂಚೂನಿಯಲ್ಲಿದ್ದು, ಅಪಾರವಾದ ಸಾಧನೆ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ವಿಭಾಗದ ಡಿವೈಎಸ್ಪಿ ಸ್ನೇಹಾರಾಜ್ ತಿಳಿಸಿದರು.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲೂ ಹಲವಾರು ಮಹಿಳೆಯರು ತಮ್ಮದೇಯಾದ ಸಾಧನೆಯನ್ನು ಮಾಡಿದ್ದಾರೆ. ಸ್ವಾತಂತ್ರ್ಯ ನಂತರವೂ ಸಂವಿಧಾನದ ಮೂಲಕ ಮಹಿಳೆಯರಿಗೆ ಅನೇಕ ಹಕ್ಕು-ಅಧಿಕಾರಗಳನ್ನು ನೀಡಲಾಯಿತು. ಅದನ್ನು ಸದುಪಯೋಗಿಸಿಕೊಂಡು ಹಲವಾರು ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ಅಂತವರನ್ನು ಆದರ್ಶವಾಗಿ ತೆಗೆದುಕೊಂಡು ವಿದ್ಯಾರ್ಥಿನಿಯರು ಮಹತ್ತರ ಸಾಧನೆ ಮಾಡಬೇಕು ಎಂದರು.
ವಕೀಲ ವೃತ್ತಿ ಅತ್ಯಂತ ಮಹತ್ತರವಾದ ಕೆಲಸವಾಗಿದ್ದು, ವಿದ್ಯಾರ್ಥಿಗಳು ವಕೀಲರಾಗಿ ಯಶಸ್ಸು ಗಳಿಸಬೇಕಾದರೇ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇಂಗ್ಲೀಷ್ ಭಾಷೆ ಅತ್ಯಂತ ಅವಶ್ಯಕವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಗಮನಹರಿಸಬೇಕು. ನಿತ್ಯವೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಲಲಿತಾ ಭಾಯಿ, ಸಹಾಯಕ ಪ್ರಾಧ್ಯಾಪಕಿ ಎಂ.ಅಶ್ವಿನಿ, ಕನ್ನಡ ಉಪನ್ಯಾಸಕ ಡಾ.ಕೆ.ಎಂ.ನಾಗೇಶ್, ಭೋದಕೇತರ ಸಿಬ್ಬಂದಿಗಳಾದ ಭಾಸ್ಕರ್, ಸ್ವಾಮಿ, ಸೋಮಣ್ಣ, ಪ್ರಮೋದ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net