ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ಗುಂಡ್ಲುಪೇಟೆ ತಾಲೂಕಿನ ಹುಲಿಯಮ್ಮನ ಕೆರೆಯ ಹೂಳೆತ್ತುವ ಕಾಮಗಾರಿಗೆ ಜಯಂತ್ ಪೂಜಾರಿ ಚಾಲನೆ ನೀಡಿದರು. ದಿನೇಶ್, ಚಂದ್ರಶೇಖರ್, ಎಚ್.ಪಿ.ಮಹೇಂದ್ರ, ನಾಗೇಂದ್ರನಾಯ್ಕ, ಚಿದಾನಂದ್, ದಿನೇಶ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಹುಲಿಯಮ್ಮನ ಕೆರೆಯ ಹೂಳೆತ್ತುವ ಕಾಮಗಾರಿಗೆ ಜಯಂತ್ ಪೂಜಾರಿ ಚಾಲನೆ ನೀಡಿದರು. ದಿನೇಶ್, ಚಂದ್ರಶೇಖರ್, ಎಚ್.ಪಿ.ಮಹೇಂದ್ರ, ನಾಗೇಂದ್ರನಾಯ್ಕ, ಚಿದಾನಂದ್, ದಿನೇಶ್ ಇದ್ದರು.
Published on
ಗುಂಡ್ಲುಪೇಟೆ : ಕಾಡಿನಲ್ಲಿ ವನ್ಯಜೀವಿಗಳಿಗೆ ಅಲ್ಲೇ ಆಹಾರ ಮತ್ತು ನೀರು ದೊರಕಿದರೆ ಅವು ಕಾಡಂಚಿನ ಗ್ರಾಮಗಳಿಗೆ ದಾಳಿ ಇಡುವುದು ತಪ್ಪುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿರುವ ಕೆರೆಗಳ ಹೂಳೆತ್ತಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕೆಲಸ ಜತೆಗೆ ಜನಸಾಮಾನ್ಯರ ಉತ್ತಮ ಬದುಕಿಗಾಗಿ ಸೇವೆ ಸಲ್ಲಿಸುತ್ತಿದೆ. ವನ್ಯಜೀವಿಗಳನ್ನು ಉಳಿಸುವುದು ಹಾಗೂ ಅರಣ್ಯವನ್ನು ಕಾಪಾಡಿಕೊಳ್ಳುವ ಕಾರ್ಯ ಎಲ್ಲರ ಹೊಣೆಯಾಗಿದೆ.
ಬಿಸಿಲಿನ ತಾಪಮಾನಕ್ಕೆ ಮಾನವರೇ ಕಂಗಲಾಗುವಾಗ ಮೂಕ ಪ್ರಾಣಿಗಳು ಏನು ಮಾಡಲು ಸಾಧ್ಯ? ಆದ್ದರಿಂದ ಹುಲಿ ಯೋಜನೆಯ ಕುಂದಕೆರೆ ವಲಯದ ಅರಣ್ಯಪ್ರದೇಶದಲ್ಲಿರುವ ಹುಲಿಯಮ್ಮನ ಕೆರೆ, ಈರನ ಕೆರೆ ಹಾಗೂ ಸಿದ್ದರಾಮನ ಕೆರೆಗಳ ಹೂಳೆತ್ತಿಸುವ ಮೂಲಕ ವನ್ಯಜೀವಿಗಳ ದಾಹ ತಣಿಸಲು ಯತ್ನಿಸಲಾಗುವುದು ಎಂದರು.
ಕಳೆದ ವರ್ಷ ಬಂಡೀಪುರದಲ್ಲಿ ಕೆರೆ ಹೂಳೆತ್ತಿಸಿದ ಪರಿಣಾಮ ಬೇಸಿಗೆಯಲ್ಲಿಯೂ ಹೆಚ್ಚಿನ ನೀರಿನ ಸಂಗ್ರಹ ಇದೆ. ವನ್ಯಜೀವಿಗಳಿಗೆ ಕುಡಿಯುವ ನೀರು ಸಮೃದ್ಧವಾಗಿ ಸಿಗುತ್ತಿದೆ. ಕಾಡು ಪ್ರಾಣಿಗಳು ನೀರಿಗಾಗಿ, ಆಹಾರಕ್ಕಾಗಿ ಹಳ್ಳಿಗಳಿಗೆ ದಾಳಿ ಮಾಡುವುದು ಇದರಿಂದ ತಪ್ಪುತ್ತದೆ. ಇದರಿಂದ ದುರಂತ ಸಂಭವಿಸುವ ಮುನ್ನವೇ ಅವುಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾಡಿನಲ್ಲೇ ಕಲ್ಪಿಸಿಕೊಡಲು ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆಯ ಎಚ್.ಪಿ.ಮಹೇಂದ್ರ, ಕುಂದಕೆರೆ ವಲಯಾರಣ್ಯಾಧಿಕಾರಿ ನಾಗೇಂದ್ರನಾಯ್ಕ, ಚಿದಾನಂದ್, ದಿನೇಶ್ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net