ಸರ್ಕಾರಿ ನಿವೃತ್ತ ನೌಕರರಿಂದ ಮೌನಪ್ರತಿಭಟನೆ

ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಎನ್.ನಾಗೇಶ್, ರಾಜು, ಹೊನ್ನೂರಯ್ಯ, ಶಿವಣ್ಣ, ಶ್ರೀನಿವಾಸ್, ಭಾಗ್ಯಲಕ್ಷ್ಮಿ, ನಾಗಮಣಿ, ಪದ್ಮಾಕ್ಷಿ, ಚಿಕ್ಕಮಾದಯ್ಯ ಇತರರಿದ್ದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಎನ್.ನಾಗೇಶ್, ರಾಜು, ಹೊನ್ನೂರಯ್ಯ, ಶಿವಣ್ಣ, ಶ್ರೀನಿವಾಸ್, ಭಾಗ್ಯಲಕ್ಷ್ಮಿ, ನಾಗಮಣಿ, ಪದ್ಮಾಕ್ಷಿ, ಚಿಕ್ಕಮಾದಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ವಾರ್ಷಿಕ ತುಟ್ಟಿಭತ್ಯೆ ನೀಡುವಂತೆ ಆಗ್ರಹ
  • ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದ ನಿವೃತ್ತ ನೌಕರರು
  • ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಮನವಿ
ಚಾಮರಾಜನಗರ: ನಿವೃತ್ತ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರ ಹಣಕಾಸು ಸಚಿವರ ಹೇಳಿಕೆ ಖಂಡಿಸಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾಘಟಕದ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಮೌನಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಜಮಾಯಿಸಿದ ಸರ್ಕಾರಿ ನಿವೃತ್ತ ನೌಕರರು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡರ ಮೂಲಕ ಪ್ರಧಾನಿನರೇಂದ್ರಮೋದಿ ಅವರಿಗೆ ಮನವಿಸಲ್ಲಿಸಿದರು.
ತುಟ್ಟಿಭತ್ಯೆ ಪಡೆಯುವ ಸಂಬಂಧ ನಿವೃತ್ತ ನೌಕರರೊಬ್ಬರು ಸುಪ್ರಿಂಕೋರ್ಟ್ ಮೊರೆಹೋಗಿದ್ದರು. ನಿವೃತ್ತ ನೌಕರರ ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಚಂದ್ರಚೂಡ ನೇತೃತ್ವದ ವಿಭಾಗೀಯಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಆಯಾಯ ಸರ್ಕಾರಗಳು ತುಟ್ಟಿಭತ್ಯೆ ಕೊಡಬೇಕು ಎಂದು ತೀರ್ಪು ನೀಡಿತು. ಅಂದಿನಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರು ತುಟ್ಟಿಭತ್ಯೆ ಪಡೆಯುತ್ತಿದ್ದರು ಎಂದು ಹೇಳಿದರು. ‘
60 ವರ್ಷದ ನಂತರ ನಿವೃತ್ತರಿಗೆ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗಳಿಂದ ನಿವೃತ್ತರು ಗುಣಮುಖರಾಗಬೇಕಾದರೆ ಸರ್ಕಾರ ಆಯಾಯ ಕಾಲಘಟ್ಟದಲ್ಲಿ ಮಂಜೂರು ಮಾಡುತ್ತಿದ್ದ ತುಟ್ಟಿಭತ್ಯೆಯೇ ಆಧಾರವಾಗಿದೆ. ನಿವೃತ್ತ ನೌಕರರಿಗೆ ಜನವರಿ, ಜುಲೈ ತಿಂಗಳಲ್ಲಿ ಆರು ತಿಂಗಳಿಗೊಮ್ಮೆ ವರ್ಷಕ್ಕೆ 2 ಬಾರಿ ತುಟ್ಟಿಭತ್ಯೆ ನೀಡುತ್ತಿದ್ದರು. ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಸೀತಾರಾಮನ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ತುಟ್ಟಿಭತ್ಯೆ ಕೊಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ನಿವೃತ್ತರ ಬದುಕಿನ ಕೊನೆಯ ಗಳಿಗೆಯಲ್ಲಿ ಆಸರೆಯಾಗುವುದೇ ತುಟ್ಟಿಭತ್ಯೆ, ಅದನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸದೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎನ್.ನಾಗೇಶ್, ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಹೊನ್ನೂರಯ್ಯ, ಖಜಾಂಚಿ ಶಿವಣ್ಣ, ನಿರ್ದೇಶಕರಾದ ಶ್ರೀನಿವಾಸ್, ಭಾಗ್ಯಲಕ್ಷ್ಮಿ, ನಾಗಮಣಿ, ಪದ್ಮಾಕ್ಷಿ, ಚಿಕ್ಕಮಾದಯ್ಯ ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net