ಸಿದ್ದಯ್ಯನಪುರ ಗಟ್ಟಿತನದ ಜನರ ನೆಲ. ಗ್ರಾಮದ ಸಣ್ಣ ರೈತ ಪ್ರಕಾಶ್ ಪುತ್ರ ಚಂದನ್ ಖೋ ಖೋದಲ್ಲಿ ದೊಡ್ಡ ಸಾಧನೆ ಮಾಡಿರುವುದು ವಿಶೇಷ. ಗ್ರಾಮಸ್ಥರ ಕಾಳಜಿ, ಪ್ರೋತ್ಸಾಹಿ ಎಸ್‌ಡಿಎಂಸಿ, ಪಾಲಕ ಸ್ನೇಹಿ ಶಿಕ್ಷಕರ ಬಳಗ, ಉತ್ಸಾಹಿ ಪಿಟಿ ಮಾಸ್ಟರ್ ನಾರಾಯಣ್ ಅವರಿಂದ ಊರಿನ ಸರ್ಕಾರಿ ಶಾಲೆಯ ವಾತಾವರಣ ಉತ್ತಮವಾಗಿದೆ. ಈ ಶಾಲೆಯ ವಿದ್ಯಾರ್ಥಿಯಾಗಿರುವ ಚಂದನ್ ತಂದೆ ಪ್ರಕಾಶ್ ಎಸ್‌ಡಿಎಂಸಿ ಸದಸ್ಯರೂ ಕೂಡ ಆಗಿದ್ದಾರೆ. ಖೋ ಖೋ ಕ್ರೀಡೆಯಲ್ಲಿ ಚಂದನ್ ಹೊಂದಿದ್ದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ತಾಲೂಕು, ಜಿಲ್ಲೆ, ವಿಭಾಗ ಮತ್ತು ಇನ್ನಿತರೆ ಮಟ್ಟಗಳಲ್ಲಿ ಆಟವಾಡಿ ಸೈ ಎನಿಸಿಕೊಂಡಿದ್ದ ಚಂದನ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಈಗ ಸಾಧನೆ ಮಾಡಿದ್ದಾನೆ.