ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು. ಜನ ಕಲ್ಯಾಣ ನಮ್ಮ ಗುರಿ ಎಂಬ ಧೈಯ ವಾಕ್ಯದಂತೆ ಜವಾಬ್ದಾರಿಯುತ ಮತ್ತು ದೂರದೃಷ್ಟಿಯ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಜನರ ಬದುಕನ್ನು ಬದಲಿಸುವ ಬದ್ಧತೆಯ ಬಜೆಟ್ ಇದಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹಾಗೂ ಸಮಾಜದ ಎಲ್ಲ್ಲ ವರ್ಗಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ರೂಪಿಸಲಾಗಿದೆ. ಆರೋಗ್ಯ, ಶಿಕ್ಷಣ, ಯುವಜನ, ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಉತ್ತಮ ಅಂಶ ಎಂದು ತಿಳಿಸಿದ್ದಾರೆ.