ಸಿದ್ದಲಿಂಗಯ್ಯ ಜನಮಾನಸದ ಕವಿ

 ಚಾಮರಾಜನಗರ ಭೋಗಾಪುರ ಗ್ರಾಮದ ಸಮೀಪದಲ್ಲಿರುವ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ವೆಂಕಟರಾಜು ಮಾತನಾಡಿದರು. ಸಿ.ಎಂ.ನರಸಿಂಹಮೂರ್ತಿ, ಡಾ.ಪಿ.ದೇವರಾಜು, ಪ್ರಿಯಶಂಕರ್, ಉಪನ್ಯಾಸಕರಾದ ಭಾಗ್ಯ, ಮನೋಜ್ ಕುಮಾರ್ ಇದ್ದರು.
ಚಾಮರಾಜನಗರ ಭೋಗಾಪುರ ಗ್ರಾಮದ ಸಮೀಪದಲ್ಲಿರುವ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ವೆಂಕಟರಾಜು ಮಾತನಾಡಿದರು. ಸಿ.ಎಂ.ನರಸಿಂಹಮೂರ್ತಿ, ಡಾ.ಪಿ.ದೇವರಾಜು, ಪ್ರಿಯಶಂಕರ್, ಉಪನ್ಯಾಸಕರಾದ ಭಾಗ್ಯ, ಮನೋಜ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Siddalingaiah
ಚಾಮರಾಜನಗರ: ನಾಡಿನ ಜನರ ನೋವು-ನಲಿವುಗಳನ್ನು ತಮ್ಮ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಿದ ಡಾ.ಸಿದ್ದಲಿಂಗಯ್ಯ ಅವರು ಜನಮಾನಸದ ಕವಿಯಾಗಿದ್ದಾರೆ ಎಂದು ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ತಿಳಿಸಿದರು.
ತಾಲೂಕಿನ ಭೋಗಾಪುರ ಗ್ರಾಮದ ಸಮೀಪದಲ್ಲಿರುವ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಸಿದ್ದಲಿಂಗಯ್ಯ ಅವರ 72ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆ ಇಂತಹ ಕವನ ಸಂಕಲನಗಳ ಮೂಲಕ ನಾಡಿನ ಜನರ ನೋವು-ನಲಿವುಗಳನ್ನು ಸಿದ್ದಲಿಂಗಯ್ಯ ಅವರು ದಾಖಲಿಸಿದ್ದಾರೆ. ಆ ಮೂಲಕ ಜನ ಮಾನಸದ ಕವಿಯಾಗಿದ್ದಾರೆ ಎಂದರು.
ಉಪನ್ಯಾಸಕ ಬಸವಣ್ಣ ಮೂಕಹಳ್ಳಿ ಮಾತನಾಡಿ, ಸಿದ್ದಲಿಂಗಯ್ಯ ಅವರ ಕಾವ್ಯಗಳಲ್ಲಿ ಬಂಡಾಯವಷ್ಟೇ ಅಲ್ಲದೆ ಪ್ರೇಮ, ಮೈತ್ರಿ, ಕಾರುಣ್ಯವನ್ನು ಒಳಗೊಂಡ ತಾಯಿತನದ ಅಭಿವ್ಯಕ್ತಿಗಳು ಇವೆ. ಅವರ ಸಾಹಿತ್ಯದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಅವರ ದಟ್ಟವಾದ ಪ್ರಭಾವವಿದೆ ಎಂದು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಧೀಮಂತ ಕವಿಯಾಗಿ ನಿಲ್ಲುತ್ತಾರೆ. ಅವರು ಕವಿತೆಗಳ ಮೂಲಕ ಹೋರಾಟದ ಹಾಡುಗಳನ್ನು, ಚಲನಚಿತ್ರ ಗೀತೆಗಳನ್ನು ಹಾಗೂ ರಂಗಗೀತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು, ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಿಯಶಂಕರ್, ಉಪನ್ಯಾಸಕರಾದ ಭಾಗ್ಯ, ಮನೋಜ್ಕುಮಾರ್, ವಿಶ್ವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net