ಇದಕ್ಕೂ ಮುನ್ನ ಕೊಳ್ಳೇಗಾಲ ಶ್ರೀಮಲೆ ಮಹದೇಶ್ವರ ಕಲಾ ತಂಡ ವತಿಯಿಂದ ಭಜನೆ ಕಾರ್ಯಕ್ರಮ ನೆರವೇರಿತು. ಸಮಾರಂಭ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ಮೈಸೂರು ಕಲ್ಲು ಮಠ ಅಗರ ಹಾಗೂ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಕೊಳ್ಳೇಗಾಲ ಭಿಕ್ಷದ ಮಠದ ಶಿವ ಸ್ವಾಮೀಜಿ, ಚಲನಚಿತ್ರ ನಟ ಬಸವಟ್ಟಿ ಲೋಕೇಶ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಬಸವ ಮಹಾಮನೆ ಅಧ್ಯಕ್ಷ ಮಲ್ಲೇಶಪ್ಪ, ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ನಂದೀಶ್, ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಎಸ್.ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಹನೂರು ತಾಲೂಕು ಅಧ್ಯಕ್ಷ ಸೋಮಶೇಖರ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ರಾಜು ತಿಮ್ಮರಾಜೀಪುರ, ಕಾರ್ಯದರ್ಶಿ ಮಹೇಶ್, ಸಾಹಿತಿ ಪುಟ್ಟಪ್ಪ, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ನಿರ್ದೇಶಕ ಮಹದೇವಸ್ವಾಮಿ, ನಗರಸಭೆ ಮಾಜಿ ಸದಸ್ಯ ಜಿ.ಪಿ.ಶಿವಕುಮಾರ್, ಸುಮಾ ಸುಬ್ಬಣ್ಣ, ಮಾಜಿ ಉಪಾಧ್ಯಕ್ಷ ಹರ್ಷ, ಲಯನ್ಸ್ ಸಂಸ್ಥೆಯ ಜಿ.ಎಸ್.ಎಂ ಮಹದೇವಪ್ರಸಾದ್ ಮತ್ತಿತರರಿದ್ದರು.