ರೋಟರಿ ಸಂಸ್ಥೆಯಿಂದ ಶಿಲ್ಪಾನಾಗ್‌ಗೆ ಸನ್ಮಾನ

 ಚಾಮರಾಜನಗರದ ರೋಟರಿ ಭವನದಲ್ಲಿ ರೋಟರಿ ಸಿಲ್ಕ್‌ಸಿಟಿ ಹಾಗು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿರ್ಗಮಿತ ಡಿಸಿ ಶಿಲ್ಪಾನಾಗ್ ಸನ್ಮಾನ ಸ್ವೀಕರಿಸಿದರು. ಗಿರೀಶ್ ದೊಡ್ಡರಾಯಪೇಟೆ,  ಪ್ರಭಾಕರ್, ಕಾಗಲವಾಡಿ ಚಂದ್ರು, ಸಿದ್ದರಾಜು, ಸಂತೋಷ್, ಜಿ.ಆರ್. ಆಶ್ವಥ್‌ನಾರಾಯಣ್, ಡಾ.ಆರ್.ಎಸ್.ನಾಗಾರ್ಜುನ್,  ಆರ್.ಎಂ.ಸ್ವಾಮಿ, ಡಿ.ಪಿ.ವಿಶ್ವಾಸ್, ಸಿದ್ದಮಲ್ಲಪ್ಪ ಮತ್ತು ಇತರರು ಹಾಜರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಭಿನಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ
  • ರೋಟರಿ ಕಾರ್ಯಗಳಿಗೆ ನಿರ್ಗಮಿತ ಡಿಸಿ ಮೆಚ್ಚುಗೆ
ಚಾಮರಾಜನಗರ: ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಅಭಿವೃದ್ದಿಗೆ ಒಂದಿಷ್ಟು ಕೆಲಸ ಮಾಡಿರುವ ತೃಪ್ತಿ ಇದೆ. ಮುಂದೆಯೂ ಸಹ ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಅಭಿವೃದ್ಧಿಯ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಸಿಲ್ಕ್‌ಸಿಟಿ ಹಾಗು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಚಾಮರಾಜನಗರಕ್ಕೆ ಬರುವ ಮುಂಚೆ ಈ ಜಿಲ್ಲೆಯ ಫೀಡ್‌ಬ್ಯಾಕ್ ತೆಗೆದುಕೊಂಡಿದ್ದೆ. ಜಿಲ್ಲೆಯ ಅಭಿವೃದ್ದಿಗೆ ನನ್ನದೇ ಅದ ಕೊಡುಗೆ ನೀಡಬೇಕೆಂಬ ನನ್ನ ಹಂಬಲಕ್ಕೆ ರೋಟರಿ ಹಾಗೂ ರೋಟರಿ ಸಿಲ್ಕ್ ಸಿಟಿ ಸೇರಿದಂತೆ ಸಂಘ ಸಂಸ್ಥೆಗಳು, ರೈತರು ಹಾಗು ದಲಿತ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದವು ಎಂದು ಸ್ಮರಿಸಿದರು.
ರೋಟರಿ ಸಹಾಯಕ ಗೌರ್ನರ್ ದೊಡ್ಡರಾಯಪೇಟೆ ಗೀರೀಶ್ ಮಾತನಾಡಿ, ಶಿಲ್ಪಾನಾಗ್ ಅವರು ಜಿಲ್ಲೆಯ ಅಭಿವೃದ್ಧಿಗೆ ಬದ್ದರಾಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸಿ ಉತ್ತಮ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ಶಿಲ್ಪಾನಾಗ್ ಅವರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ಬರಲಿ ಎಂದು ಆಶಿಸಿದರು.
ಕೈಗಾರಿಕೋದ್ಯಮಿ ಪ್ರಭಾಕರ್ ಮಾತನಾಡಿದರು. ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಸಿದ್ದರಾಜು, ಸಿಲ್ಕ್ ಸಿಟಿ ಕಾರ್ಯದರ್ಶಿ ಸಂತೋಷ್, ರೋಟರಿಯನ್‌ಗಳಾದ ಜಿ.ಆರ್. ಆಶ್ವಥ್‌ನಾರಾಯಣ್, ಡಾ.ಆರ್.ಎಸ್.ನಾಗಾರ್ಜುನ್, ಆರ್.ಎಂ.ಸ್ವಾಮಿ, ನಾಗರಾಜು, ಕೆಂಪನಪುರ ಮಹದೇವಸ್ವಾಮಿ, ದೀನಾ, ಶ್ರೀನಿವಾಸ್, ಡಿ.ಪಿ.ವಿಶ್ವಾಸ್, ಭವಾನಿ ದೇವಿ, ಸಿದ್ದಮಲ್ಲಪ್ಪ ಮತ್ತು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net