ಸುಮಾರು 8 ಸಾವಿರ ಜನಸಂಖ್ಯೆಯಿರುವ ಗ್ರಾಮದ ಎಲ್ಲ ಚರಂಡಿಗಳ ನೀರು ಹರಿದುಹೋಗಲು ಗ್ರಾಮ ಪಂಚಾಯಿತಿಯು ಕ್ರಮಕೈಗೊಳ್ಳದ ಪರಿಣಾಮ ಕೊಳಚೆ ನೀರು ವಡೆಯನಪುರಕ್ಕೆ ಹೋಗುವ ರಸ್ತೆಯಲ್ಲಿ ಮಡುಗಟ್ಟಿ ನಿಲ್ಲುತ್ತಿದೆ. ಇತ್ತೀಚೆಗೆ ಬಿದ್ದ ಮಳೆ ನೀರು ಸೇರಿಕೊಂಡು ತಗ್ಗು ಪ್ರದೇಶದಲ್ಲಿ ಕಿಲೋ ಮೀಟರ್ ಉದ್ದಕ್ಕೆ ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ರೈತರು, ಕಾರ್ಮಿಕರು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾವರು ಕೊಳಚೆ ನೀರು ಹಾದುಹೋಗಲು ತುಂಬ ಪರದಾಡುತ್ತಿದ್ದಾರೆ. ರಸ್ತೆಯ ಅಂಚಿನಲ್ಲಿ ಅಲ್ಲಲ್ಲಿ ರಸ್ತೆಯು ಕುಸಿದು ದೊಡ್ಡ ಹೊಂಡಗಳಾಗಿವೆ.