ಏನೂ ಪ್ರಯೋಜವಾಗಿಲ್ಲ: ಸಂಸದ ಸುನೀಲ್‌ಬೋಸ್ 2025ರ ಜೂ.25ರಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಬರೆದು, ನಾಗವಳ್ಳಿ ಗ್ರಾಮದ ಚರಂಡಿ ನೀರು ದೊಡ್ಡಕೆರೆಗೆ ಸೇರುತ್ತಿದೆ. ಕೆರೆಯ ಪರಿಸರ ಭಾಗಶಃ ಹಾಳಾಗುತ್ತಿದೆ. ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದು, ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಬಳಿಕ 2025 ನ.17ರಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪತ್ರ ಬರೆದು ನಾಗವಳ್ಳಿ ಗ್ರಾಮದಲ್ಲಿ ಚರಂಡಿ ನೀರು ಕೆರೆಗೆ ಹೋಗುತ್ತಿರುವುದನ್ನು ತಡೆದು ಚರಂಡಿ ನಿರ್ಮಾಣ ಮಾಡಲು 39 ಲಕ್ಷ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಕೆ ಮಾಡಿದ್ದರು. ಆದರೆ ಇದಾದ ಇಷ್ಟು ದಿನಗಳೇ ಕಳೆಯುತ್ತಿದ್ದರೂ ಚರಂಡಿ ನಿರ್ಮಾಣ ಮಾಡಿ ಕೊಳಚೆ ನೀರು ಕೆರೆಗೆ ಸೇರದಂತೆ ಮಾಡುವ ಕಾರ್ಯ ಶುರುವಾಗಿಲ್ಲ. ಪ್ರತಿದಿನ ಊರಿನ ಕೊಳಚೆ ನೀರು ಕೆರೆಗೆ ಸೇರಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಯಿಂದ ಬೂದು ನೀರು ನಿರ್ವಹಣೆಯ ಕಾಮಗಾರಿಯನ್ನು ಯಾವ ಸ್ಥಳದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಕೊನೆ ಪಕ್ಷ ಕೆರೆಯ ಮಾಲಿನ್ಯ ತಪ್ಪಿಸಲು ಇಲ್ಲಾದರೂ ಕಾಮಗಾರಿ ಮಾಡಬಹುದಿತ್ತು ಎನ್ನುವ ಯೋಚನೆಯನ್ನು ಕೈಗೊಂಡಿಲ್ಲ.