ಕೊಳ್ಳೇಗಾಲದಲ್ಲಿ ಸಂತ ಸೇವಾಲಾಲ್ ಜಯಂತಿ

ಕೊಳ್ಳೇಗಾಲ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸಂತ ಸೇವಾಲಾಲ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ತಹಸೀಲ್ದಾರ್ ಬಸವರಾಜು, ಗ್ರೇಡ್ 2 ತಹಸೀಲ್ದಾರ್ ಕುಮಾರ್, ಭೂ ಮಾಪನ ಅಧಿಕಾರಿ ನಟರಾಜು, ಬಂಜಾರ ಸೇವಾ ಸಂಘ ಅಧ್ಯಕ್ಷ ಗುರುಸ್ವಾಮಿ ಇತರರು ಹಾಜರಿದ್ದರು.

Published on
ಕೊಳ್ಳೇಗಾಲ: ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸಂತ ಸೇವಾಲಾಲ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ತಾಲೂಕು ಕಚೇರಿಯ ತಹಸಿಲ್ದಾರ್ ಕೊಠಡಿಯಲ್ಲಿ ಸೇವಾಲಾಲ್ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಬಳಿಕ ಪುಷ್ಪ ನಮನ ಸಲ್ಲಿಸಲಾಯಿತು.
ಬಂಜಾರ ಸೇವಾ ಸಂಘ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಬಂಜಾರ ಸಮಾಜ ಸಂತ ಸೇವಾಲಾಲ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ನಮ್ಮ ಸಂತರು ಮದ್ಯ ವ್ಯಸನದಿಂದ ದೂರವಾಗಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಹಸಿದವರಿಗೆ ಅನ್ನ, ಬಾಯಾರಿ ಬಂದವರಿಗೆ ನೀರನ್ನು ಕೊಡಬೇಕು ಎಂಬ ಹಿತೋಕ್ತಿಗಳನ್ನು
ಬೋಧಿ ಸಿದ್ದಾರೆ. ಅದರಂತೆ ವನ ಸಿರಿಯನ್ನು ಪ್ರೀತಿಸುವ ಮೂಲಕ ಯಾರಿಗೂ ತೊಂದರೆ ನೀಡದ ರೀತಿಯಲ್ಲಿ ನಮ್ಮ ಸಮುದಾಯದವರು ಬದುಕು ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಬಸವರಾಜು, ಗ್ರೇಡ್ 2 ತಹಸೀಲ್ದಾರ್ ಕುಮಾರ್, ಭೂ ಮಾಪನ ಅಧಿಕಾರಿ ನಟರಾಜು, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಉಮಾಶಂಕರ್, ಬಂಜಾರ ಸೇವಾ ಸಂಘ ಅಧ್ಯಕ್ಷ ಗುರುಸ್ವಾಮಿ, ಜಿಲ್ಲಾ ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಶಾಂತರಾಜು, ಮುನಿನಾಯ್ಕ, ತುಳಸಿ ನಾಯ್ಕ, ಶ್ಯಾಮ್ ಕುಮಾರ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net