ಕಾನೂನಾತ್ಮಕ ಹೋರಾಟಕ್ಕೆ ಸೇವಾ ಸಮಿತಿ ಬೆಂಬಲ

ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಹೆಬ್ಬಾಗಿಲಿನ ವಿಚಾರವಾಗಿ ಆಯೋಜಿಸಿದ್ದ ಸಭೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು ಮಾತನಾಡಿದರು. ಕಿನಕಹಳ್ಳಿ ರಾಚಯ್ಯ, ಗ್ರಾಮಸ್ಥರು ಇದ್ದರು.
ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಹೆಬ್ಬಾಗಿಲಿನ ವಿಚಾರವಾಗಿ ಆಯೋಜಿಸಿದ್ದ ಸಭೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು ಮಾತನಾಡಿದರು. ಕಿನಕಹಳ್ಳಿ ರಾಚಯ್ಯ, ಗ್ರಾಮಸ್ಥರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು ಭರವಸೆ
ಯಳಂದೂರು: ಯರಿಯೂರು ಗ್ರಾಮದ ಅಂಬೇಡ್ಕರ್ ಹೆಬ್ಬಾಗಿಲನ್ನು ವಿಚಾರವಾಗಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ತಾಲೂಕಿನಲ್ಲಿ ಹೋರಾಟ ಮಾಡೋಣ ಎಂದು ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು ಭರವಸೆ ನೀಡಿದರು.
ತಾಲೂಕಿನ ಯರಿಯೂರು ಗ್ರಾಮಕ್ಕೆ ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಸದಸ್ಯರು ಸೋಮವಾರ ಭೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಮಾಡಿ ಮಾತನಾಡಿದರು. ಪರಿಶಿಷ್ಟ ಜಾತಿ ಬಡಾವಣೆಗೆ ಹೋಗುವ ದಾರಿಯಲ್ಲಿ ಅಂಬೇಡ್ಕರ್ ಹೆಬ್ಬಾಗಿಲು ನಿರ್ಮಾಣ ವಿಚಾರದಲ್ಲಿ ಭಾನುವಾರ ಬೆಳಗ್ಗೆ ಪೊಲೀಸರು ತಡೆ ಹಿಡಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಅಂಬೇಡ್ಕರ್ ಸೇವಾ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳು ಜತೆಗೂಡಿ ಹೆಬ್ಬಾಗಿಲ ವಿಚಾರವಾಗಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂದು ಹೇಳಿದರು.
ಅಂಬೇಡ್ಕರ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಟರಾಜು, ಸಹ ಕಾರ್ಯದರ್ಶಿ ಕೊಮಾನಪುರ ಪುಟ್ಟರಾಜು, ಜಿ.ಪಂ.ಮಾಜಿ ಸದಸ್ಯ ಕಮಲ್, ನಿರ್ದೇಶಕರಾದ ಅಗರ ಲಿಂಗರಾಜು, ಕಿನಕಹಳ್ಳಿ ರಾಚಯ್ಯ, ಜಯರಾಮು,ಮುಖಂಡರಾದ ನಿರಂಜನ್, ಸೋಮಣ್ಣ, ಮಧು, ಮಹೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net