ರೇಷ್ಮೆ ಕೃಷಿ ಲಾಭದಾಯಕ

ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ರೇಷ್ಮೆ ಕೃಷಿ ತರಬೇತಿ ಕೇಂದ್ರದಲ್ಲಿ  ಗುರುವಾರ ಆಯೋಜಿಸಿದ್ದ ರೇಷ್ಮೆ ಕೃಷಿ ಬೆಳೆಗಾರರ ಸಮಾವೇಶವನ್ನು ರೈತರೊಬ್ಬರು ಉದ್ಘಾಟಿಸಿದರು. ಬಿ.ಆರ್. ಪ್ರತಿಭಾ, ಎಂ.ರೇಣುಕೇಶ್,  ಕೆ.ಎಸ್.ಕುಮಾರ ಸುಬ್ರಮಣ್ಯ, ಡಾ.ಶಿವಕುಮಾರ್, ಡಾ.ಬಿ.ಕೆ.ಚಂದ್ರಶೇಖರ್ ಇತರರು ಹಾಜರಿದ್ದರು.
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ರೇಷ್ಮೆ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ರೇಷ್ಮೆ ಕೃಷಿ ಬೆಳೆಗಾರರ ಸಮಾವೇಶವನ್ನು ರೈತರೊಬ್ಬರು ಉದ್ಘಾಟಿಸಿದರು. ಬಿ.ಆರ್. ಪ್ರತಿಭಾ, ಎಂ.ರೇಣುಕೇಶ್, ಕೆ.ಎಸ್.ಕುಮಾರ ಸುಬ್ರಮಣ್ಯ, ಡಾ.ಶಿವಕುಮಾರ್, ಡಾ.ಬಿ.ಕೆ.ಚಂದ್ರಶೇಖರ್ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುದೇರು ಗ್ರಾಮದ ರೇಷ್ಮೆ ಕೃಷಿ ತರಬೇತಿ ಕೇಂದ್ರದಲ್ಲಿ ರೇಷ್ಮೆ ಕೃಷಿ ಬೆಳೆಗಾರರ ಸಮಾವೇಶ
  • ರೇಷ್ಮೆ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಬಿ.ಆರ್. ಪ್ರತಿಭಾ ಸಲಹೆ
ಚಾಮರಾಜನಗರ: ರೇಷ್ಮೆ ಲಾಭದಾಯಕ ಕೃಷಿಯಾಗಿದ್ದು, ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳಬೇಕೆಂದು ರೇಷ್ಮೆ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಬಿ.ಆರ್. ಪ್ರತಿಭಾ ತಿಳಿಸಿದರು.
ತಾಲೂಕಿನ ಕುದೇರು ಗ್ರಾಮದ ರೇಷ್ಮೆ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರೇಷ್ಮೆ ಕೃಷಿ ಬೆಳೆಗಾರರ ಸಮಾವೇಶ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಬೆಳೆಗಾರರು ಸುಧಾರಿತ ರೇಷ್ಮೆ ತಳಿಗಳು ಹಾಗೂ ಅದರ ಅಭಿವೃದ್ಧಿಗೆ ಇರುವ ವೈಜ್ಞಾನಿಕ ಪದ್ದತಿಗಳ ಬಗ್ಗೆ ಮಾಹಿತಿ ಪಡೆದು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಹೆಚ್ಚು ಲಾಭಗಳಿಸಲು ಸಾಧ್ಯ ಎಂದು ಹೇಳಿದರು.
ರೇಷ್ಮೆ ಇಲಾಖೆ ಚಾಮರಾಜನಗರ ಉಪ ನಿರ್ದೇಶಕ ಎಂ.ರೇಣುಕೇಶ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕ ಡಾ.ಡೆನ್ನಿಸ್ ಡಿ ಚೌಹಾಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನುರಿತ ವಿಜ್ಞಾನಿಗಳಿಂದ ರೈತರಿಗೆ ರೇಷ್ಮೆ ಕೃಷಿಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು. ಹಿಪ್ಪುನೇರಳೆ ಕೀಟ ನಿಯಂತ್ರಣ ಹಾಗೂ ರೋಗ ನಿಯಂತ್ರಣ, ಹಿಪ್ಪುನೇರಳೆ ಬೇಸಾಯ ಹಾಗೂ ಮಾರುಕಟ್ಟೆ ವಹಿವಾಟಿನ ಬಗ್ಗೆ, ಋತುಮಾನ ಆಧಾರಿತ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ತಿಳಿಸಿಕೊಡಲಾಯಿತು.
ರೇಷ್ಮೆ ಉಪನಿರ್ದೇಶಕ ಕೆ.ಎಸ್ ಕುಮಾರ ಸುಬ್ರಮಣ್ಯ, ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ವಿಜ್ಞಾನಿ ಡಾ.ಶಿವಕುಮಾರ್, ನಿವೃತ್ತ ವಿಜ್ಞಾನಿ ಡಾ.ಬಿ.ಕೆ.ಚಂದ್ರಶೇಖರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ ನಾಯಕ್, ವ್ಯವಸ್ಥಾಪಕ ಚಿನ್ನಮಹದೇವ, ಪ್ಲೇಸ್ಮೆಂಟ್ ವ್ಯವಸ್ಥಾಪಕ ರವಿಕುಮಾರ್, ಸಂಯೋಜಕರಾದ ಅಬ್ದುಲ್ ರಶೀದ್ ಮತ್ತು ರೈತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net