ರಾಜ್ಯ ರೈತ ಸಂಘ,ಹಸಿರುಸೇನೆಯ ಪದಾಧಿಕಾರಿಗಳ ಆಯ್ಕೆ

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೊಳ್ಳೇಗಾಲ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌಡೇಗೌಡ, ರವಿನಾಯ್ಡು, ಕುಮಾರಸ್ವಾಮಿ, ಲೋಕೇಶ್ ಇತರರಿದ್ದರು.
ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೊಳ್ಳೇಗಾಲ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌಡೇಗೌಡ, ರವಿನಾಯ್ಡು, ಕುಮಾರಸ್ವಾಮಿ, ಲೋಕೇಶ್ ಇತರರಿದ್ದರು.
Published on
ಕೊಳ್ಳೇಗಾಲ: ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೊಳ್ಳೇಗಾಲ ತಾಲೂಕು ಸಮಿತಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ನೂತನವಾಗಿ ಆಯ್ಕೆ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಶಿವಮಲ್ಲು ಅವರ ನೇತೃತ್ವದಲ್ಲಿ ಕೊಳ್ಳೇಗಾಲ ತಾಲೂಕು ಸಮಿತಿಗೆ ನೂತನ ಅಧ್ಯಕ್ಷರಾಗಿ ಮೋಳೆ ನಟೇಶ್, ಗೌರಾವಧ್ಯಕ್ಷರಾಗಿ ಮಧುವನಹಳ್ಳಿ ಮಸಣಶೆಟ್ಟಿ, ಉಪಾಧ್ಯಕ್ಷರಾಗಿ ರಾಜಣ್ಣ ಬೆಂಡರವಾಡಿ, ಅಶೋಕ ಸರಗೂರು, ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ ಚಿಕ್ಕಿಂದುವಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್ ಸೂರಪುರ, ನಾಗರಾಜು ಜಿನಕಹಳ್ಳಿ, ಸಹ ಕಾರ್ಯದರ್ಶಿಯಾಗಿ ಸುನೀಲ್ ಬೆಂಡ್ರಹಳ್ಳಿ, ಖಜಾಂಚಿಯಾಗಿ ತಾಂಡವಮೂರ್ತಿ ಮಧುವನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿ ಕುಮಾರ ಚಿಕ್ಕಲ್ಲೂರು, ಉಪಾಧ್ಯಕ್ಷರಾಗಿ ನಾಗರಾಜು ಜಿನಕಹಳ್ಳಿ, ಸಿದ್ದರಾಜು ಚಿಕ್ಕಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್ ಕೊಳ್ಳೇಗಾಲ ಮೋಳೆ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಜ್.ಬಿ.ಸರಗೂರು ನೇಮಕ ಮಾಡಲಾಯಿತು.
ರೈತ ಮುಖಂಡರಾದ ಗೌಡೇಗೌಡ, ರವಿನಾಯ್ಡು, ಕುಮಾರಸ್ವಾಮಿ, ಲೋಕೇಶ್, ಬಸವೇಶ್, ನಾಗರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net