ಇಸ್ಲಾಮಿಯ ಅಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ

ಕೊಳ್ಳೇಗಾಲ ಅಂಜುಮನ್ ಇ-ಇಸ್ಲಾಮಿಯ ಅಡಳಿತ ಮಂಡಳಿಗೆ ಬಾನುವಾರ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರು ಆಯ್ಕೆಯಾದರು.
ಕೊಳ್ಳೇಗಾಲ ಅಂಜುಮನ್ ಇ-ಇಸ್ಲಾಮಿಯ ಅಡಳಿತ ಮಂಡಳಿಗೆ ಬಾನುವಾರ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರು ಆಯ್ಕೆಯಾದರು.
Published on
ಕೊಳ್ಳೇಗಾಲ: ಇಲ್ಲಿನ ಅಂಜುಮನ್ ಇ-ಇಸ್ಲಾಮಿಯ ಅಡಳಿತ ಮಂಡಳಿ ಆಯ್ಕೆಗೆ ಬಾನುವಾರ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರು ಆಯ್ಕೆಯಾದರು.
ಪಟ್ಟಣದ ಎಸ್.ವಿ.ಕೆ ಕಾಲೇಜು ಆವರಣದಲ್ಲಿ ಜಿಲ್ಲಾ ಉದ್ಯೋಗ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಮಹಮ್ಮದ್ ಅಕ್ಬರ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಕೊಳ್ಳೇಗಾಲ ವ್ಯಾಪ್ತಿಯಲ್ಲಿರುವ 9 ಮಸೀದಿಗಳಲ್ಲಿ ಒಟ್ಟು 1870 ಮತಗಳ ಪೈಕಿ ಚುನಾವಣೆಯಲ್ಲಿ 1680 ಮತ ಚಲಾವಣೆಗೊಂಡಿತು. ಚುನಾವಣೆಯಲ್ಲಿ 35 ಜನರು ಸ್ಪರ್ಧಿಸಿದ್ದು ಈ ಪೈಕಿ 14 ಜನರು ನಿರ್ದೇಶಕರಾಗಿ ಚುನಾಯಿತರಾದರೆ ಒಬ್ಬ ಸ್ಪರ್ಧಿ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದವರು: ಚುನಾವಣೆಯಲ್ಲಿ ರಾಜೀವ್ ನಗರ ಮಸೀದ್ ಎ ಸಾದ್‌ನ ಸಜ್ಜಾದ್ ಪಾಷಾ ಅವಿರೋಧವಾಗಿ ಆಯ್ಕೆಯಾದರು. ಜಾಮೀಯಾ ಮಸೀದಿ (ದೊಡ್ಡ ಮಸೀದಿ) ಸ್ಪರ್ಧಿಯಾದ ಮೊಹಮದ್ ಮುಹೀಬುಲ್ಲಾಷರೀಫ್, ಅಯಾಜ್ ಪಾಷಾ, ಮೊಹಮ್ಮದ್ ಅತೀಖ್ ಪಾಷಾ, ಖುದ್ಧಸೀಯಾ ಮಸೀದಿ ಯ (ಚಿಕ್ಕ ಮಸೀದಿ) ಅಯೂಬ್‌ಖಾನ್, ವಾಸೀಮ್ ಅಹಮದ್, ಅಬ್ದುಲ್ ಜಬೀವುಲ್ಲಾ, ಈದ್ಗಾ ಮೊಹಲ್ಲಾ ಅಮೀನಾ ಮಸೀದಿಯ ಹಬೀಬ್ ಪಾಷಾ, ಅಬ್ದುಲ್ ಸಾದೀಕ್, ವಿದ್ಯಾನಗರ ಫರೀದಾ ಮಸೀದಿ ಫಸಿವುಲ್ಲಾ ಖಾನ್, ರಾಮಸ್ವಾಮಿ ಲೇಔಟ್ ಮಹಬೂಬಿಯಾ ಮಸೀದಿಯ ಅಬ್ದುಲ್ ಖಾದರ್, ನೂರ್ ಮೊಹಲ್ಲಾ ಮಹಬೂಬಿಯಾ ಮಸೀದಿಯ ಜಮೀಲ್ ಪಾಷಾ ಹಾಗೂ ಮಹಮ್ಮದ್ ಮತೀನ್, ಮುಡಿಗುಂಡ ಅಶ್ರಫ್ ಮಸೀದಿಯ ಎ.ಆಲ್ತಾಫ್, ಆಶ್ರಯ ಬಡಾವಣೆಯ ಮಸೀದಿಯ ವಸೀಂ ಪಾಷಾ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಘೋಷಿಸಿದರು.
ಲಾಟರಿ ಮೂಲಕ ಗೆಲುವು: ಮುಡಿಗುಂಡ ಆಶ್ರಫ್ ಮಸೀದಿಯಿಂದ ಸ್ಪರ್ಧಿಸಿದ್ದ ಅಲ್ತಾಫ್ ಹಾಗೂ ಸೋ ಯೇಬ್ ಅಹ್ಮದ್ ಅವರು ತಲಾ 20 ಮತಗಳು ಪಡೆದಿದ್ದು, ಈ ಪೈಕಿ ಅಲ್ತಾಫ್ ಅವರು ಲಾಟರಿ ಮೂಲಕ ಜಯಗಳಿಸಿದ್ದಾರೆ. ಜಯಶೀಲರಾದ ಎಲ್ಲ ನಿರ್ದೇಶಕರಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net