ಹಾವು, ಚೇಳುಗಳ ವಾಸಸ್ಥಾನವಾದ ಶಾಲಾವರಣ

ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಗಿಡಗಂಟಿ ಬೆಳೆದು ನಿಂತಿರುವುದು.
ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಗಿಡಗಂಟಿ ಬೆಳೆದು ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ
  • ಗಿಡಿಗಂಟಿಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯ
ಹನೂರು: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಬೆಳೆದು ನಿಂತಿರುವ ಗಿಡಿಗಂಟಿಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 150ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಈಗ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿವೆ. ಆದರೆ, ಶಾಲೆಯ ಪ್ರವೇಶ ದ್ವಾರ ಮುಂಭಾಗದ 2 ಬದಿಯಲ್ಲೂ ಗಿಡಿಗಂಟಿಗಳು ಆಳೆತ್ತರಕ್ಕೆ ಬೆಳೆದಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿರುವ ಜತೆಗೆ ಅನೈರ್ಮಲ್ಯ ಮನೆ ಮಾಡಿದೆ. ಹಾವು, ಚೇಳುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.
ಹೆಚ್ಚಿನ ಮಕ್ಕಳು ಈ ಮಾರ್ಗದಲ್ಲೇ ಶಾಲೆಗೆ ತೆರಳುವುದರಿಂದ ಅವರಲ್ಲಿ ಭಯದ ವಾತವರಣವನ್ನು ಉಂಟು ಮಾಡಿದ್ದು, ಸಮಸ್ಯೆಯನ್ನು ಎದುರಿಸುವಂತಾಗಿದೆ. ಶಾಲೆ ಆರಂಭವಾಗಿರುವುದರಿಂದ ಗಿಡಿಗಂಟಿಗಳನ್ನು ತೆರೆವುಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮವಹಿಸಿಲ್ಲ. ಆದ್ದರಿಂದ ಸಂಬಂಧಪಟ್ಟವರು ಮಕ್ಕಳ ಹಿತದೃಷ್ಟಿಯಿಂದ ಇನ್ನಾದರೂ ಇತ್ತ ಗಮನಹರಿಸಿ ಶಾಲೆಯ ಮುಂಭಾಗ ಬೆಳೆದು ನಿಂತಿರುವ ಗಿಡಿಗಂಟಿಗಳನ್ನು ತೆರೆವುಗೊಳಿಸುವುದರ ಮೂಲಕ ನೈರ್ಮಲ್ಯ ಕಾಪಾಡುವಂತೆ ಗ್ರಾಮದ ಮಹೇಶ್ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net