ಸಿಬ್ಬಂದಿ ಮುಖದಲ್ಲಿ ಮರಳಿದ ಲವಲವಿಕೆ: ಸಫಾರಿ ಬಂದ್ ಆಗಿದ್ದ ನಂತರ ಅತಂತ್ರರಾಗಿದ್ದ ವಾಹನ ಚಾಲಕರು, ಗೈಡ್‌ಗಳು, ನ್ಯಾಚುರಲಿಸ್ಟ್‌ಗಳ ಮುಖದಲ್ಲಿ ಸಫಾರಿ ಪುನರಾರಂಭಗೊಂಡ ನಂತರ ಲವಲವಿಕೆ ಮರುಕಳಿಸಿದೆ. ಸಫಾರಿ ಡ್ರೆಸ್ ಕೋಡ್‌ನಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೌಂಟರ್ ಸಮೀಪವಿರುವ ಮಳಿಗೆಗಳಲ್ಲಿ ಪ್ರವಾಸಿಗರು ಹುಲಿ, ಆನೆ, ಚಿರತೆಗಳ ಚಿತ್ರಗಳಿರುವ ಟಿ-ಶರ್ಟ್, ಪ್ಯಾಂಟ್‌ಗಳನ್ನು ಖರೀದಿಸುತ್ತಿದ್ದಾರೆ.