ವ್ಯೆಲೈನ್ ನಿರ್ಮಾಣ ಕಾಮಗಾರಿಗೆ ಸಫಾರಿ ಸಿಬ್ಬಂದಿ ಬಳಕೆ

ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ಅರಣ್ಯ ಇಲಾಖೆಯ ಸಫಾರಿ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಕಳೆಗಳನ್ನು ತೆರವುಗೊಳಿಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ಅರಣ್ಯ ಇಲಾಖೆಯ ಸಫಾರಿ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಕಳೆಗಳನ್ನು ತೆರವುಗೊಳಿಸುತ್ತಿದ್ದಾರೆ.
Published on
ಗುಂಡ್ಲುಪೇಟೆ: ಕಳೆದ ಒಂದು ತಿಂಗಳಿನಿಂದ ಬಂಡೀಪುರದಲ್ಲಿ ಸಫಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನ್ನ ಸಿಬ್ಬಂದಿಯನ್ನು ವ್ಯೆಲೈನ್ ನಿರ್ಮಾಣ ಕಾಮಗಾರಿಗೆ ಬಳಸಿಕೊಳ್ಳುತ್ತಿದೆ.
ಹೆಡಿಯಾಲ ಸುತ್ತಮುತ್ತಲೂ ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ರೈತ ಸಂಘದ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಸಫಾರಿ ಬಂದ್ ಮಾಡಿದೆ. ಆರಂಭದಲ್ಲಿ ಸಫಾರಿ ವಾಹನಗಳ ಚಾಲಕರು ಹಾಗೂ ಗೈಡ್‌ಗಳನ್ನು ಹೆಡಿಯಾಲ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಬಳಕೆ ಮಾಡಲಾಗಿತ್ತು. ಸದ್ಯ ಆ ಭಾಗದಲ್ಲಿ ಕಾಡಿನಿಂದ ಹೊರಬಂದು ಜನವಸತಿ ಪ್ರದೇಶದಲ್ಲಿ ನೆಲೆಸಿದ್ದ ಎಲ್ಲ ಹುಲಿಗಳನ್ನು ಸೆರೆಹಿಡಿದ ನಂತರವೂ ಸಫಾರಿ ಆರಂಭಿಸಲು ಅನುಮತಿ ದೊರಕದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನ್ನ ಸಿಬ್ಬಂದಿಯನ್ನು ವ್ಯೆಲೈನ್ ನಿರ್ಮಾಣ ಕಾಮಗಾರಿಗೆ ಬಳಸಿಕೊಳ್ಳುತ್ತಿದೆ.
ಸದ್ಯ ಸಫಾರಿಯ 30 ಸಿಬ್ಬಂದಿ ರಸ್ತೆಗಳ ಬದಿಗಳಲ್ಲಿ ಬೆಳೆದಿರುವ ಲಾಂಟಾನ ಮುಂತಾದ ಕಳೆಗಳನ್ನು ತೆರೆವುಗೊಳಿಸಲು ಶ್ರಮದಾನ ಮಾಡುತ್ತಿದ್ದಾರೆ. ಒಂದು ತಿಂಗಳಿನಿಂದ ಸಫಾರಿ ಬಂದ್ ಆಗಿದ್ದರಿಂದ ಸಫಾರಿ ರಸ್ತೆ ಗೋಪಾಲಸ್ವಾಮಿಬೆಟ್ಟ ವಲಯದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಸುತ್ತಮುತ್ತಲಿನ ರಸ್ತೆಗಳ ಬದಿಗಳಲ್ಲಿ ಹಾಗೂ ಸಫಾರಿ ರಸ್ತೆಯ ಆಲಗಟ್ಟೆ ಕೆರೆ ಏರಿಯ ಮೇಲೆ ಬೆಳೆದಿರುವ ಲಾಂಟಾನ ಮುಂತಾದ ಗಿಡಗಳನ್ನು ತೆರವು ಮಾಡುವ ಮೂಲಕ ವ್ಯೆ ಲೈನ್ ನಿರ್ಮಾಣ ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net