ಅವರು ಶನಿವಾರ ತಾಲೂಕಿನ ಕಟ್ನವಾಡಿ, ಕೆಸ್ತೂರು, ರಾಮಾಪುರ, ಅರೇಪಾಳ್ಯ, ಚಾಟೀಪುರ, ವೈ.ಕೆ.ಮೋಳೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಡಾ ಸೇರಿದಂತೆ ವಿವಿಧ ರಸ್ತೆ, ಚೆಕ್‌ಡ್ಯಾಂ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 19.50 ಕೋಟಿ ರೂ., ಚೆಕ್ ಡ್ಯಾಂ ನಿರ್ಮಾಣಕ್ಕೆ 5.55 ಕೋಟಿ ರೂ., ಗಂಗಾ ಕಲ್ಯಾಣ ಇಲಾಖೆಯ ವತಿಯಿಂದ 100 ಕೊಳವೆ ಬಾವಿ, ಕೆರೆಗಳ ಅಭಿವೃದ್ಧಿಗೆ 29.02 ಕೋಟಿ ರೂ., ಹಿರೀಕೆರೆ ಅಭಿವೃದ್ಧಿಗೆ 14.5 ಕೋಟಿ ರೂ. ಹಣವೂ ಸೇರಿದೆ.