ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡಿ

ಚಾಮರಾಜನಗರದ ತಾಲೂಕುಪಂಚಾಯಿತಿ  ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್.ಸೋಮೇಶ್ವರ್ ಮಾತನಾಡಿದರು. ಗಿರಿಧರ್, ಕಿರಣ್ ಕುಮಾರ್ ಇದ್ದರು.
ಚಾಮರಾಜನಗರದ ತಾಲೂಕುಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್.ಸೋಮೇಶ್ವರ್ ಮಾತನಾಡಿದರು. ಗಿರಿಧರ್, ಕಿರಣ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಸೋಮೇಶ್ವರ್ ಸೂಚನೆ
  • ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ
  • ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ
ಚಾಮರಾಜನಗರ: ಬಡವರ ಮತ್ತು ಮಹಿಳೆಯರ ಅರ್ಥಿಕ ಸ್ವಾವಲಂಬನೆಗಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಯೋ ಎಂಬುದರ ಬಗ್ಗೆ ತಾಲೂಕು ಮಟ್ಟದ ಯೋಜನಾಧಿಕಾರಿಗಳು ಪರಿಶೀಲಿಸಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವರದಿಸಲ್ಲಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಸೋಮೇಶ್ವರ್ ಸೂಚನೆ ನೀಡಿದರು.
ನಗರದ ತಾಲೂಕುಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸಭೆಗಳನ್ನು ನಡೆಸಿದ ಪರಿಣಾಮವಾಗಿ ತಳಮಟ್ಟದ ಸಮಸ್ಯೆಗಳು ತಿಳಿಯುತ್ತಿವೆ. ಗ್ರಾಮ ಪಂಚಾಯಿತಿ ಮತ್ತು ಹೋಬಳಿಮಟ್ಟದಲ್ಲಿ ನಡೆಯುವ ಗ್ಯಾರಂಟಿ ಯೋಜನೆಗಳ ಸಭೆ ವರದಿಗಳನ್ನು ಸರ್ಕಾರಕ್ಕೆ ಪ್ರತಿತಿಂಗಳ 5ರೊಳಗೆ ಸಲ್ಲಿಸಬೇಕು. ಫಲಾನುಭವಿಗಳ ಅಭಿಪ್ರಾಯ ಸಂಗ್ರಹ ಮಾಡಿ, ಅದರ ವಿಡಿಯೋ ತುಣುಕುಗಳನ್ನು ಫೆ.5ರೊಳಗೆ ಜಿಲ್ಲಾ ಅನುಷ್ಠಾನ ಸಮಿತಿಗೆ ಸಲ್ಲಿಸಬೇಕು ಎಂದು ಸೂಚನೆ ಮಾಡಿದರು.
ಸಭೆಯಲ್ಲಿ ಸದಸ್ಯರಾದ ಮಂಜುಳಾ, ಮರಿಯಾಲದಹುಂಡಿ ಕುಮಾರ್, ಮಾದಾಪುರಕುಮಾರ್, ಮೂಡಳ್ಳಿ ರಾಜೇಶ್, ರಾಜು, ಚಿನ್ನಸ್ವಾಮಿ, ಮಲ್ಲಿಕಾರ್ಜುನ್ ಲಿಂಗನಪುರ, ರಂಗಸ್ವಾಮಿ, ಚಂದುಕಟ್ಟೆಮೋಳೆ ಗಣೇಶ್, ರಮೇಶ್, ತಾ.ಪಂ ಇಒ ಗಿರಿಧರ್, ಯೋಜನಾಧಿಕಾರಿ ಕಿರಣ್ ಕುಮಾರ್ ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net