ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಭಾರತದ ಸನಾತನ ಸಂಸ್ಕೃತಿಯ ಮೂಲ ಬೇರು ಮಾತೆಯಾಗಿದ್ದಾರೆ. ಮಾತೆಯರು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದರೆ ಇಂದು ರಸ್ತೆಗಳು, ಮನೆಗಳು ಹಾಗೂ ಕಾಂಪೌಂಡ್‌ಗಳು ದೊಡ್ಡದಾಗುತ್ತಿವೆ. ಮನಸ್ಸುಗಳು ಮಾತ್ರ ಸಂಕುಚಿತವಾಗುತ್ತಿವೆ. ಮಾತೆಯರು ಅಧ್ಯಾತ್ಮಿಕವಾಗಿ ಸಶಕ್ತಿಕರಣಗೊಳ್ಳದಿರುವುದರಿಂದ ಮನೆಯಲ್ಲಿ ತಂದೆತಾಯಿ ಕಂಡರೆ ಮಕ್ಕಳಿಗೆ, ಮಕ್ಕಳನ್ನು ಕಂಡರೆ ತಂದೆ ತಾಯಿಗಳಿಗೆ ಆಗುತ್ತಿಲ್ಲ. ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತಾಂಡವಾಡುತ್ತಿವೆ ಎಂದು ಬೇಸರಿಸಿದರು.