ಹಂದಿಗಳ ಉಪಟಳಕ್ಕೆ ನಿವಾಸಿಗಳು ಹೈರಾಣ

ಕೊಳ್ಳೇಗಾಲ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಹಂದಿಗಳು ಕಾಣಿಸಿಕೊಂಡಿರುವುದು.
ಕೊಳ್ಳೇಗಾಲ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಹಂದಿಗಳು ಕಾಣಿಸಿಕೊಂಡಿರುವುದು.
Published on
ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ ಸುತ್ತಮುತ್ತ ದಿನೇ ದಿನೆ ಹಂದಿಗಳ ಉಪಟಳ ಹೆಚ್ಚಾಗಿದ್ದು ನಿಯಂತ್ರಣಕ್ಕೆ ನಗರಸಭೆ ಕ್ರಮವಹಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಬಡಾವಣೆ ಸುತ್ತಲಿರುವ ತೆರೆದ ಚರಂಡಿ, ಮುಳ್ಳು ಗುಂದಿಗಳಲ್ಲಿ ಬೀಡು ಬಿಟ್ಟಿರುವ ಹಂದಿಗಳು ದಿನವಿಡೀ ಬಡಾವಣೆಯೊಳಗೆ ಬಂದು ಮನೆಗಳ ಸುತ್ತ ಅಡ್ಡಾಡುತ್ತಾ ಗಲೀಜು ಮಾಡುತ್ತಿವೆ. ಇದರಿಂದ ಬಡಾವಣೆಯ ನೈರ್ಮಲ್ಯ ಹಾಳಾಗಿದೆ. ಕೆಲ ತಿಂಗಳಿಂದ ಹಂದಿಗಳ ಕಾಟ ವಿಪರೀತವಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ವಾಯು ವಿಹಾರಕ್ಕೆ ತೆರಳುವವರಿಗೆ ಕಾಟ ಕೊಡುತ್ತಿವೆ. ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲು ಕ್ರಮವಹಿಸುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಬಡಾವಣೆಯಲ್ಲಿ ಹಂದಿಗಳ ಕಾಟವಿರುವುದರ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಉಪಟಳ ತಪ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬಡಾವಣೆಯಲ್ಲಿ ಅನೈರ್ಮಲ್ಯ ಉಂಟು ಮಾಡುತ್ತಿವೆ. ನಗರಸಭೆ ಎಚ್ಚೆತ್ತು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ ನಿವಾಸಿ ವಿಶ್ವ ಮನವಿ ಮಾಡಿದ್ದಾರೆ.

ಹಂದಿಗಳಿಂದ ಬಡಾವಣೆ ನಿವಾಸಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರಿದೆ. ಹಂದಿ ಸಾಕುವವರಿಗೂ ನೋಟಿಸ್ ನೀಡಲು ಕ್ರಮವಹಿಸಲಾಗಿದೆ. ಹಂದಿಗಳನ್ನು ಹೊರಗಡೆ ಬಿಡಬಾರದು ಎಂದು ಸೂಚನೆ ನೀಡಲಾಗಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಹಂದಿಗಳ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು.

ನಟರಾಜು, ನಗರಸಭೆ ಪ್ರಭಾರ ಪೌರಾಯುಕ್ತ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net