ಟಿಎಪಿಸಿಎಂಎಸ್ ಗೋದಾಮುಗಳ ದುರಸ್ತಿಗೆ ಮನವಿ

 ಚಾಮರಾಜನಗರದ ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ತಾಲೂಕು  ವ್ಯವಸಾಯೋತ್ಪನ್ನ  ಮಾರಾಟ ಸಹಕಾರ ಸಂಘದ  ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎಚ್.ಎಂ.ಬಸವಣ್ಣ ( ಹೊಸೂರು ಸುಂದ್ರಪ್ಪ) ಮಾತನಾಡಿದರು.  ಅಂಕಯ್ಯ, ಎಚ್.ಎಂ.ಮಹದೇವಪ್ರಭು, ಎಲ್.ಶಿವಕುಮಾರ್, ಎಚ್.ಎಲ್.ರಾಜೇಶ್, ಕೆ.ಎಂ.ರೂಪೇಶ್, ಶಿವಕುಮಾರ್ ಇತರರು ಇದ್ದರು.
ಚಾಮರಾಜನಗರದ ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎಚ್.ಎಂ.ಬಸವಣ್ಣ ( ಹೊಸೂರು ಸುಂದ್ರಪ್ಪ) ಮಾತನಾಡಿದರು. ಅಂಕಯ್ಯ, ಎಚ್.ಎಂ.ಮಹದೇವಪ್ರಭು, ಎಲ್.ಶಿವಕುಮಾರ್, ಎಚ್.ಎಲ್.ರಾಜೇಶ್, ಕೆ.ಎಂ.ರೂಪೇಶ್, ಶಿವಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
  • ನಷ್ಟದಲ್ಲಿರುವ ಸಂಘದ ಅಭಿವೃದ್ಧಿಗೆ ಶ್ರಮ

ಚಾಮರಾಜನಗರ :

ರೈತರು ಹಾಗೂ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸುವ ಮೂಲಕ ಸರ್ಕಾರ ಹಾಗೂ ಸಂಘದಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ತಲುಪಿಸಲು ಶ್ರಮಿಸುವುದಾಗಿ ಚಾಮರಾಜನಗರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ಬಸವಣ್ಣ(ಹೊಸೂರು ಸುಂದ್ರಪ್ಪ) ಹೇಳಿದರು.

ನಗರದ ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ ನಷ್ಟದಲ್ಲಿದ್ದು, ಹಂತ ಹಂತವಾಗಿ ಲಾಭದತ್ತ ಕೊಂಡೊಯ್ಯವ ನಿಟ್ಟಿನಲ್ಲಿ ಸಂಘದ ಆಡಳಿತ ಮಂಡಳಿ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಸಂಘದಿಂದ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಸಂಘದ ಕಟ್ಟಡ ಹಾಗೂ ಗೋದಾಮುಗಳ ದುರಸ್ತಿಗೆ ಅನುದಾನ ಕೋರಿ ಮನವಿ ಮಾಡಿದ್ದೇವೆ. ಸ್ಪಂದಿಸಿ, ಸರ್ಕಾರ ಹಾಗೂ ಎಂಡಿಸಿಸಿ ಬ್ಯಾಂಕ್‌ನಿಂದ ಅನುದಾನ ಕೊಡಿಸುವ ಭರಸವೆ ನೀಡಿದ್ದಾರೆ. ಗೋದಾಮುಗಳನ್ನು ದುರಸ್ತಿಪಡಿಸಿ, ಬಾಡಿಗೆಗೆ ನೀಡಿ, ಆದಾಯವನ್ನು ಕ್ರೋಡೀಕರಿಸಲಾಗುತ್ತದೆ. ಸಂಘದ ಅಭಿವೃದ್ಧಿಗೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಅಭಿವೃದ್ಧಿ ಬಗ್ಗೆ ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ, ಕೆಂಪನಪುರ ಶಿವಶಂಕರ್, ಶ್ರೀಕಂಠಮೂರ್ತಿ ಸೇರಿ ಅನೇಕ ರೈತರು ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಪ್ರಭಾರ ಕಾರ್ಯದರ್ಶಿ ಎಂ.ಎಸ್.ಸಿದ್ದಲಿಂಗಮೂರ್ತಿ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.
ಸಂಘದ ಉಪಾಧ್ಯಕ್ಷ ಅಂಕಯ್ಯ, ನಿರ್ದೇಶಕರಾದ ಎಚ್.ಎಂ.ಮಹದೇವಪ್ರಭು, ಎಲ್.ಶಿವಕುಮಾರ್, ಎಚ್.ಎಲ್.ರಾಜೇಶ್, ಕೆ.ಎಂ.ರೂಪೇಶ್, ಶಿವಕುಮಾರ್, ಎನ್.ಕೃಷ್ಣ, ನಾಗೇಶ ನಾಯಕ, ಕೆ.ವಿ.ನಾಗರಾಜು, ಸಾಕಮ್ಮ, ರತ್ನಮ್ಮ, ಎ.ಆರ್.ಶೋಭಾ, ಮಹದೇವ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net