ರಾಮೇಗೌಡ, ವೆಂಕಟೇಶ್‌ಗೆ ಎಆರ್‌ಕೆ ಅಭಿಮಾನಿ ಬಳಗದಿಂದ ಸನ್ಮಾನ

ಬಿಳಿಗಿರಿರಂಗನಬೆಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮೇಗೌಡ ಹಾಗೂ ವೆಂಕಟೇಶ್ ಅವರನ್ನು ಎಆರ್‌ಕೆ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಕಂದಹಳ್ಳಿ ನಂಜುಂಡಸ್ವಾಮಿ, ವಿಜಯ್, ಶಿವನಂಜಯ್ಯ ಇದ್ದರು.
ಬಿಳಿಗಿರಿರಂಗನಬೆಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮೇಗೌಡ ಹಾಗೂ ವೆಂಕಟೇಶ್ ಅವರನ್ನು ಎಆರ್‌ಕೆ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಕಂದಹಳ್ಳಿ ನಂಜುಂಡಸ್ವಾಮಿ, ವಿಜಯ್, ಶಿವನಂಜಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
  • ಅಪರೂಪದ ಕಾಡು ಸಸ್ಯಗಳ ಸಂರಕ್ಷಕ
  • ಸೋಲಿಗ ಜನಾಂಗದ ರಾಮೇಗೌಡ
  • ಕಾಂಗ್ರೆಸ್‌ನ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ವೆಂಕಟೇಶ್
ಯಳಂದೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಪರೂಪದ ಕಾಡು ಸಸ್ಯಗಳ ಸಂರಕ್ಷಕರೂ ಆದ ಸೋಲಿಗ ಜನಾಂಗದ ರಾಮೇಗೌಡ ಹಾಗೂ ಕಾಂಗ್ರೆಸ್‌ನ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ವೆಂಕಟೇಶ್ ಅವರನ್ನು ಎಆರ್‌ಕೆ ಅಭಿಮಾನಿ ಬಳಗ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ರಾಮೇಗೌಡರು ಬುಡಕಟ್ಟು ಸೋಲಿಗ ಜನಾಂಗದಲ್ಲಿ ಜನಿಸಿ ತಮ್ಮ ತಂದೆಯವರಿಂದ ಅರಣ್ಯ ಗಿಡಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದಾರೆ. ನಶಿಸುತ್ತಿರುವ ಅರಣ್ಯ ಗಿಡಗಳ ಸಂತತಿಯನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ. ನೂರಾರು ಗಿಡಗಳ ಕಾಂಡ, ಬೇರು, ಬೀಜಗಳನ್ನು ತಂದು ಅವುಗಳನ್ನು ಗಿಡಗಳನ್ನಾಗಿ ಪರಿವರ್ತಿಸಿ ನರ್ಸರಿಯ ಮಾಡಿದ್ದಾರೆ. ಅಲ್ಲದೆ ಇದನ್ನು ಆಸಕ್ತರಿಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದರೊಂದಿಗೆ ಪ್ರಕೃತಿಯ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದು, ಅಪರೂಪದ ಜೀವಜಂತುಗಳ ರಕ್ಷಕರಾಗಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳು ಲಭಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ ಎಂದು ಮಾಹಿತಿ ನೀಡಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಜಯ್, ಗ್ರಾಪಂ ಮಾಜಿ ಸದಸ್ಯ ಶಿವನಂಜಯ್ಯ, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ರೂಪೇಶ್, ಮಾದೇಶ್, ಪ್ರದೀಪ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net