ಹನೂರಿನಲ್ಲಿ ಶುಕ್ರವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಮುಖಂಡರು ಶ್ರೀ ರಾಮನ ಭಾವಚಿತ್ರದೊಂದಿಗೆ ಭಜನೆ ಸಹಿತ ಮೆರವಣಿಗೆ ನಡೆಸಿದರು. ಶ್ರೀನಿವಾಸನಾಯ್ಡು, ರಾಧಾಕೃಷ್ಣ, ಗೋವಿಂದೇಗೌಡ, ಪ್ರಕಾಶ್, ರಘು, ಶಶಿಕುಮಾರ್, ನಾಗರಾಜು, ಉಪನ್ಯಾಸಕ ಜಯಕುಮಾರ್ ಇದ್ದರು.
ಹನೂರು : ಪಟ್ಟಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶುಕ್ರವಾರ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮನ ಭಾವಚಿತ್ರದೊಂದಿಗೆ ಭಜನೆ ಸಹಿತ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಯೋಗ ಬಂಧುಗಳು ರಾಮ ನಾಮ ಪಠಣದೊಂದಿಗೆ
ಸಾರ್ವಜನಿಕರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಿದರು. ಬಳಿಕ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಶ್ರೀನಿವಾಸನಾಯ್ಡು, ರಾಧಾಕೃಷ್ಣ, ಗೋವಿಂದೇಗೌಡ, ಪ್ರಕಾಶ್, ರಘು, ಶಶಿಕುಮಾರ್, ನಾಗರಾಜು, ಉಪನ್ಯಾಸಕ ಜಯಕುಮಾರ್, ಶಿಕ್ಷಕ ಮಾದ ತಂಬಡಿ ಇತರರು ಇದ್ದರು.