ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ದಲಿತ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಲು ಚಾಮರಾಜನಗರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೊಳ್ಳೇಗಾಲ ಪಟ್ಟಣದಿಂದ ಶುಕ್ರವಾರ ಬಸ್ ಮೂಲಕ ತೆರಳಿದರು. ಮುಖಂಡರಾದ ಹಿಂಡಯ್ಯ, ಕವಿತಾ ಮೇರಿ, ಸಿದ್ದು, ಮರಿ ಸ್ವಾಮಿ, ಸುಂದರಮ್ಮ, ಶಿವಮ್ಮ, ಪುಟ್ಟಸ್ವಾಮಿ ಮತ್ತಿತರಿದ್ದರು.
ಕೊಳ್ಳೇಗಾಲ : ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ದಲಿತ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಲು ಚಾಮರಾಜನಗರ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಬಸ್ ಮೂಲಕ ಬೆಂಗಳೂರಿಗೆ ತೆರಳಿದರು.ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜೈಕಾರ ಘೋಷಣೆ ಮೊಳಗಿಸಿದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು.
ಡಿಎಸ್‌ಎಸ್ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯದ ಅನುಷ್ಠಾನ ಹಾಗೂ ಸಂವಿಧಾನಬದ್ಧ ಹಕ್ಕುಗಳ ಜಾರಿಗೆ ಒತ್ತಾಯಿಸಿ ಶುಕ್ರವಾರ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಿಂದ 6 ಬಸ್ ಗಳ ಮೂಲಕ 500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆಂದರು. ಸಮುದಾಯದ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶವಿದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರ ಬೆಂಬಲವೂ ಮುಖ್ಯವಾಗಿದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ಹಿಂಡಯ್ಯ, ಮುಖಂಡರಾದ ಕವಿತಾ ಮೇರಿ, ಸಿದ್ದು, ಮರಿ ಸ್ವಾಮಿ, ಸುಂದರಮ್ಮ, ಶಿವಮ್ಮ, ಮಾದೇಶ್, ಮಾರಿಯಪ್ಪ, ನಿಂಗಪ್ಪ, ಮಲ್ಲಿಕಾರ್ಜುನ, ಡಿ. ಮಹೇಶ್, ಮಂಟೆ ಸ್ವಾಮಿ ಗುಳ್ಯ, ರಾಮಲಿಂಗಂ, ಮರಿಯಮ್ಮ, ನಾಗರಾಜು, ದೇವರಾಜು, ಭಾಗ್ಯಮ್ಮ, ಪುಟ್ಟಸ್ವಾಮಿ ಮತ್ತಿತರಿದ್ದರು.