ಮಿಣ್ಯಂ ಕಂದಾಯ ಗ್ರಾಮಕ್ಕೆ ಸೇರಿದ ಗಾಜನೂರು, ಕೊಪ್ಪ ಹಾಗೂ ಮಿಣ್ಯಂ ಭಾಗದ ಸುಮಾರು 30ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲು ಗಾಳಿ, ಮಳೆಯಿಂದಾಗಿ ನೆಲಕ್ಕುರುಳಿದೆ. ಇದರಲ್ಲಿ ಮುನಿಯಪ್ಪ, ಮಹಾದೇವ ಅವರಿಗೆ ಸೇರಿದ ತಲಾ ಒಂದು ಎಕರೆ, ನಾಗರಾಜು ಅವರಿಗೆ ಸೇರಿದ ಒಂದೂವರೆ ಎಕರೆ, ಇದಿಯಮ್ಮ ಅವರಿಗೆ ಸೇರಿದ 2 ಸಾವಿರ ಬಾಳೆ ಗಿಡಿಗಳು, ಬಸವೇಗೌಡ ಅವರ ಜಮೀನಿನಲ್ಲಿ 1,200 ಗಿಡಗಳು, ವೀರಭದ್ರೇಗೌಡ, ಚಿನ್ನಮ್ಮ, ಅವರ ಜಮೀನಿನಲ್ಲಿ ತಲಾ 1,300 ಗಿಡಗಳು, ದೊಡ್ಡಯ್ಯ ಅವರ ಜಮೀನಿನಲ್ಲಿ 800, ಪುಟ್ಟಸ್ವಾಮಿ ಅವರ ಜಮೀನಿನಲ್ಲಿ 700 ಗಿಡಗಳು, ಬಸವಣ್ಣ, ಮಣಿ ಅವರ ಜಮೀನಿನಲ್ಲಿ ತಲಾ 400 ಗಿಡ, ಶಿವರಾಜು, ಗೋವಿಂದೇಗೌಡ, ರಮೇಶ್, ಮಾದೇಶ್, ಶಾಂತಮ್ಮ, ಮುರುಗ ಹಾಗೂ ಇತರ ರೈತರ ಜಮೀನುಗಳಲ್ಲಿ ನೂರಾರು ಬಾಳೆ ಗಿಡಗಳು ನೆಲ್ಲಕುರುಳಿದೆ. ಹಾಗೆಯೇ ಸಿದ್ದಯ್ಯ ಅವರ ಜಮೀನಿನಲ್ಲಿ ಟೊಮಾಟೋ ಫಸಲು ನಾಶವಾಗಿದೆ.