

ಪ್ರಮುಖ ಮುಖ್ಯಾಂಶಗಳು
ಗಮನ ಸೆಳೆದಿದ್ದ ವರದಿ:ಜಿಲ್ಲೆಯ ಉದ್ಯಾನಗಳು ಹಾಳಾಗಿರುವ ಕುರಿತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾ.10ರಂದು ‘ನಿರ್ವಹಣೆ ಇಲ್ಲದೆ ಸೊರಗಿದ ಪಾರ್ಕ್‌ಗಳು’ ಎಂಬ ಶೀರ್ಷಿಕೆಯಡಿ ಲೌಡ್ ಸ್ಪೀಕರ್ ಪ್ರಕಟಿಸಿತ್ತು. ಜಿಲ್ಲೆಯ ಹಲವು ಉದ್ಯಾನಗಳು ಅಧ್ವಾನ ಸ್ಥಿತಿ ತಲುಪಿರುವುದು, ರಸ್ತೆ ಬದಿಯಲ್ಲಿ ವಾಯುವಿಹಾರ ಮಾಡಬೇಕಾದ ಪರಿಸ್ಥಿತಿ ಇರುವ ಕುರಿತು ಸಾರ್ವಜನಿಕರು ಸಮಸ್ಯೆ ಹೇಳಿಕೊಂಡಿದ್ದರು. ಡಿಸಿ ಶ್ರೀರೂಪಾ ಮಾತನಾಡಿ, ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದಿದ್ದರು. ಅದರಂತೆ, ಸಂಘ-ಸಂಸ್ಥೆಗಳ ಸಹಕಾರ ಪಡೆದು ಖುದ್ದು ತಾವೇ ಆಗಮಿಸಿ ಉದ್ಯಾನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಪುಟ್ಟಮ್ಮಣಿ ಉದ್ಯಾನ ತುಂಬಾ ಸುಂದರವಾಗಿದೆ. ಇದನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಜನರಿಗೆ ಪರಿಸರ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಚತಾ ಕಾರ್ಯಕ್ಕೆ ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ.