ಪಟ್ಟಣದ ಪಂತಜಲಿ ಯೋಗ ಕೇಂದ್ರದಲ್ಲಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗ ಸಹ ಕಾರ್ಯವಾಹ ತಿಲಕ್‌ಕುಮಾರ್ ಉಪನ್ಯಾಸ ನೀಡಿದರು.ಮಧು ಸೂದನ್, ಶಿವಕುಮಾರ್ ಇತರರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ತಿಲಕ್‌ಕುಮಾರ್ ಸೂಚನೆ
ಕೊಳ್ಳೇಗಾಲ:ಸಮಾಜದಲ್ಲಿರುವ ಮೇಲು-ಕೀಳು, ಅಸ್ಪಶ್ಯತೆ ಆಚರಣೆಗಳನ್ನು ತೊಡೆದು ಹಾಕಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗದ ಸಹ ಕಾರ್ಯವಾಹ ತಿಲಕ್‌ಕುಮಾರ್ ಹೇಳಿದರು.
ಪಟ್ಟಣದ ಪಂತಜಲಿ ಯೋಗ ಕೇಂದ್ರದಲ್ಲಿ ಶನಿವಾರ ಸಾಮಾಜಿಕ ಸದ್ಭಾವನ ಸಮಿತಿ ವತಿಯಿಂದ ಸಾಮಾಜಿಕ ಸಾಮರಸ್ಯಕ್ಕೆ ಇರುವ ಸವಾಲುಗಳು ಮತ್ತು ಪರಿಹಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹಿಂದೂ ಸಮಾಜದಲ್ಲಿ ಒಳಗೆ ಸೇರಿಕೊಂಡಿರುವ ಜಾತೀಯತೆ ಮನೋಭಾವನೆಯನ್ನು ಹೋಗಲಾಡಿಸಲು ಹಿಂದೂ ಸಮಾಜದಲ್ಲಿರುವ ಎಲ್ಲ ಸಮುದಾಯಗಳು ಒಗ್ಗೂಡಬೇಕು. ಅಸ್ಪಶ್ಯತೆ, ಮೇಲು, ಕೀಳನ್ನು ತೊಲಗಿಸುವುದು ಹೇಗೆ ಎಂಬ ಬಗ್ಗೆ ಚಿಂತಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘ 100 ವರ್ಷ ಪೂರೈಸಿದ್ದು. ಸಾಮಾಜಿಕ ಸಾಮರಸ್ಯಕ್ಕೆ ಇರುವ ಸವಾಲುಗಳು ಮತ್ತು ಪರಿಹಾರ ಕಾರ್ಯಕ್ರಮದಡಿ ಹಿಂದೂ ಸಮಾಜದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಲು ಶ್ರಮಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗದ ಸಹ ಕಾರ್ಯವಾಹ ತಿಲಕ್ ಕುಮಾರ್, ವ್ಯವಸ್ಥೆ ಪ್ರಮುಖರಾದ ಮಧು ಸೂದನ್, ಶಿವಕುಮಾರ್, ರವಿ ತೇರಂಬಳ್ಳಿ ಇತರರು ಇದ್ದರು.