ಕಾಡಾನೆ ಉಪಟಳಕ್ಕೆ ಕಡಿವಾಣ ಹಾಕಿ

ಚಂಗಡಿ ಗ್ರಾಮ ಸಮೀಪವೇ ಆಗಮಿಸಿರುವ ಕಾಡಾನೆ.
ಚಂಗಡಿ ಗ್ರಾಮ ಸಮೀಪವೇ ಆಗಮಿಸಿರುವ ಕಾಡಾನೆ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಚಂಗಡಿ ಗ್ರಾಮದ ಗ್ರಾಮಸ್ಥರ ಒತ್ತಾಯ
ಹನೂರು; ತಾಲೂಕಿನ ಕಾಡಂಚಿನ ಚಂಗಡಿ ಗ್ರಾಮದ ಸಮೀಪವೇ ಲಗ್ಗೆ ಇಡುತ್ತಿರುವ ಕಾಡಾನೆ ಉಪಟಳಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮವು ಶ್ರೀ ಮಲೆಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿದೆ. ಇತ್ತೀಚಿಗೆ ಸಂಜೆಯಾಗುತ್ತಿದ್ದಂತೆ ಕಾಡಾನೆಯೊಂದು ಗ್ರಾಮ ಸಮೀಪವೇ ಆಗಮಿಸುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯಭೀತಿಯನ್ನು ಉಂಟು ಮಾಡಿದೆ. ಕಾಡಾನೆಯು ಗ್ರಾಮದತ್ತ ಬಾರದಂತೆ ಅಗತ್ಯ ಕ್ರಮವಹಿಸಲು ಈಗಾಗಲೇ ಮನವಿ ಮಾಡಲಾಗಿದೆ.
ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಕಾಡಾನೆ ಗ್ರಾಮದತ್ತ ಆಗಮಿಸುವುದನ್ನು ರೂಢಿಸಿಕೊಂಡಿದೆ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆ? ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಕಾಡಾನೆ ಗ್ರಾಮದತ್ತ ಬಾರದಂತೆ ಅಗತ್ಯ ಕ್ರಮವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net