ಪಟ್ಟಣದ ಅಂಗಡಿ, ಹೊಟೇಲ್, ಬೇಕರಿ, ಟೈಲರ್ ಷಾಪ್, ಕಟ್ಟಡ ನಿರ್ಮಾಣ ಸ್ಥಳ, ವರ್ಕ್‌ಷಾಪ್ ಇತರೆಡೆ ಶನಿವಾರ ದಿಢೀರ್ ಭೇಟಿ ಪರಿಶೀಲಿಸಿ ಮಾತನಾಡಿದ ಅವರು, ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹೆಚ್ಚಿನ ಒತ್ತು ನೀಡಿ, ಹಲವು ಸವಲತ್ತುಗಳನ್ನು ನೀಡುತ್ತಿದೆ ಎಂದು ತಿಳಿಸಿದರು.