ಸ್ಟಾರ್ಟ್‌ಆಗದ ಬಸ್ ನೂಕಿದ ಸಾರ್ವಜನಿಕರು, ವಿದ್ಯಾರ್ಥಿಗಳು

ಗುಂಡ್ಲುಪೇಟೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸ್ಟಾರ್ಟ್ ಆಗದ ಬಸ್ಸನ್ನು   ಸಾರ್ವಜನಿಕರು ಮತ್ತು ಯುವಕರು ನೂಕಿದರು.
ಗುಂಡ್ಲುಪೇಟೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸ್ಟಾರ್ಟ್ ಆಗದ ಬಸ್ಸನ್ನು ಸಾರ್ವಜನಿಕರು ಮತ್ತು ಯುವಕರು ನೂಕಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆ
ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಸ್ಟಾರ್ಟ್ ಮಾಡಲು ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಬಸ್ ನೂಕಿದರು.
ಬಸ್ ಪಟ್ಟಣದ ಸಾರಿಗೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮೈಸೂರಿನಿಂದ ಕೇರಳದ ಕ್ಯಾಲಿಕಟ್‌ಗೆ ಹೋಗಿ ಶನಿವಾರ ವಾಪಸ್ಸಾಗುತ್ತಿದ್ದ ಬಸ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಕಂಡಕ್ಟರ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗೋಗರೆದು ನೂಕಿಸಿದರು. ಸುಸ್ಥಿತಿಯಲ್ಲಿಲ್ಲದ ಬಸ್‌ನ್ನು ಅಂತಾರಾಜ್ಯ ಪ್ರಯಾಣಕ್ಕೆ ನಿಯೋಜನೆ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಡಿದಾದ ಬೆಟ್ಟ ಮತ್ತು ತಿರುವುಗಳನ್ನು ಹೊಂದಿರುವ ಕೇರಳದ ರಸ್ತೆಗಳಲ್ಲಿ ಈ ಬಸ್‌ಗಳು ಸಂಚರಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಯಾವ ಭರವಸೆ ಮೇಲೆ ಕಳುಹಿಸುತ್ತಿದ್ದಾರೆ. ಅಲ್ಲಿಯೂ ಕೆಟ್ಟು ನಿಂತರೆ ಇಲ್ಲವೇ ಹೆಚ್ಚಿನ ವಾಹನಗಳ ಸಂದಣಿಯಿರುವ ರಸ್ತೆಗಳಲ್ಲಿ ಆಫ್ ಆದರೆ ಯಾರು ಹೊಣೆ? ಇದರಿಂದ ನೆರೆ ರಾಜ್ಯದಲ್ಲಿ ನಮ್ಮ ಸಾರಿಗೆ ಸಂಸ್ಥೆ ಬಸ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net