ಕಳ್ಳಿದೊಡ್ಡಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ

ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಕಳ್ಳಿದೊಡ್ಡಿ ಗ್ರಾಮಸ್ಥರು ಶಾಸಕ ಎಂ.ಆರ್.ಮಂಜುನಾಥ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ರವಿ, ನಾಗೇಂದ್ರಬಾಬು, ಹುಚ್ಚನಾಯ್ಕ, ದೊಡ್ಡಯ್ಯ ಮತ್ತಿತರರಿದ್ದರು.
ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಕಳ್ಳಿದೊಡ್ಡಿ ಗ್ರಾಮಸ್ಥರು ಶಾಸಕ ಎಂ.ಆರ್.ಮಂಜುನಾಥ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ರವಿ, ನಾಗೇಂದ್ರಬಾಬು, ಹುಚ್ಚನಾಯ್ಕ, ದೊಡ್ಡಯ್ಯ ಮತ್ತಿತರರಿದ್ದರು.
Published on

ಶಾಸಕ ಎಂ.ಆರ್.ಮಂಜುನಾಥ್‌ಗೆ ಗ್ರಾಮಸ್ಥರ ಮನವಿ

ಹನೂರು: ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮಸ್ಥರು ಗುರುವಾರ ಶಾಸಕ ಎಂ.ಆರ್.ಮಂಜುನಾಥ್ ಅವರ ನಿವಾಸಕ್ಕೆ ಆಗಮಿಸಿ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಹಲವು ದಶಕದಿಂದಲೂ ವಾಸಿಸುತ್ತಿದ್ದೇವೆ. ಆದರೆ ಶಾಗ್ಯದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮಣ್ಣಿನಿಂದ ಕೂಡಿದ್ದು, ಸಮರ್ಪಕ ರಸ್ತೆ ಇಲ್ಲದಂತಾಗಿದೆ. ಇದರಿಂದ ಮಳೆಗಾಲ ಹಾಗೂ ರಾತ್ರಿ ವೇಳೆ ಸಂಚರಿಸಬೇಕಾದರೆ ತುಂಬ ತೊಂದರೆ ಅನುಭವಿಸಬೇಕಾಗಿದೆ. ಇತ್ತ ಗ್ರಾಮದಲ್ಲಿ ಸಮುದಾಯ ಭವನ ಇಲ್ಲದ ಪರಿಣಾಮ ಸಭೆ, ಕಾರ್ಯಕ್ರಮವನ್ನು ಆಯೋಜಿಸಲು ತುಂಬ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮೂಲ ಸೌಕರ್ಯದಿಂದ ವಂಚಿತರಾಗಿದ್ದೇವೆ. ಆದ್ದರಿಂದ ಈ ಬಗ್ಗೆ ಕಾಳಜಿ ವಹಿಸಿ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕ್ಷೇತ್ರದ ಜನರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದು ನನ್ನ ಆದ್ಯ ಕರ್ತವ್ಯ. ಹಾಗಾಗಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ತಮ್ಮೆಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮುಖಂಡರಾದ ಶಾಗ್ಯ ರವಿ, ನಾಗೇಂದ್ರಬಾಬು, ಹುಚ್ಚನಾಯ್ಕ, ಮಾದಯ್ಯ, ಮಲ್ಲಯ್ಯನಾಯ್ಕ, ದೊಡ್ಡಯ್ಯ, ಸೀಗನಾಯ್ಕ, ಸಿದ್ದನಾಯ್ಕ, ಸಿದ್ದರಾಜು, ಮುನಿಯಪ್ಪ, ಉದ್ದನೂರು ಗಿರೀಶ್, ರುದ್ರನಾಯ್ಕ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net