ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಆಸ್ಪತ್ರೆಯ ಆಡಳಿ ತಾಧಿಕಾರಿ ಡಾ.ಲೋಕೇಶ್ವರಿ ಅವರಿಗೆ ಮನವಿ ಸಲ್ಲಿಸಿದರು. ಜಗದೀಶ್ ಶಾಸ್ತ್ರಿ, ಯೂನುಸ್ ಪಾಷ, ಪ್ರಜ್ವಲ್, ಚಂದನ್, ನಾಗರಾಜು, ಇಮ್ದಾದ್ ಪಾಷ, ಅಸ್ವಕ್, ಕಿರಣ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಲೋಕೇಶ್ವರಿಗೆ ಮನವಿ ಸಲ್ಲಿಕೆ
ಕೊಳ್ಳೇಗಾಲ: ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ತಾಯಿ ಮತ್ತು ಮಗು ವಿಭಾಗದಲ್ಲಿ ದಾಖಲಾದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಶನಿವಾರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿಗೆ ಮನವಿ ಸಲ್ಲಿಸಿದರು.
ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ವ್ಯವಸ್ಥೆ ಇದ್ದರು ಉಪಯೋಗಕ್ಕೆ ಬರುತ್ತಿಲ್ಲ. ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವ್ಯೆದ್ಯರು ಇರುವುದಿಲ್ಲ. ಹೆಚ್ಚಾಗಿ ತರಬೇತಿ ವೈದ್ಯರು ಸೇವೆ ಮಾಡುತ್ತಾರೆ. ಇವರಿಗೆ ನಾಯಿ ಕಚ್ಚಿದವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬ ತಿಳಿವಳಿಕೆ ಇರುವುದಿಲ್ಲ. ಹಾಗಾಗಿ ಮುಖ್ಯ ವೈದ್ಯರು ರೋಗಿಗಳಿಗೆ ಸೇವೆ ನೀಡಬೇಕು.
ರೋಗಿಗಳ ಬಳಿ ನರ್ಸ್‌ಗಳು ಸೌಜನ್ಯದಿಂದ ವರ್ತಿಸಬೇಕು. ಆಸ್ಪತ್ರೆಗೆ ಆಗಮಿಸಿದ ಎಲ್ಲ ರೋಗಿಗಳಿಗೂ ಸರ್ಕಾರ ಸೌಲಭ್ಯಗಳು ದೊರೆಯಬೇಕು. ಬಡ ಹಾಗೂ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಅವಲಂಬಿತರಾಗಿರುವುದರಿಂದ, ವೈದ್ಯರು ಮತ್ತು ಸಿಬ್ಬಂದಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ ಸಂಘಟನೆ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದು ವೇದಿಕೆ ಸದಸ್ಯರು ಎಚ್ಚರಿಕೆ ನೀಡಿದರು.
ಕರವೇ ಅಧ್ಯಕ್ಷ ಜಗದೀಶ್ ಶಾಸ್ತ್ರಿ, ಉಪಾಧ್ಯಕ್ಷ ಯೂನುಸ್ ಪಾಷ, ಪ್ರಜ್ವಲ್, ಪ್ರಧಾನ ಕಾರ್ಯದರ್ಶಿ ಚಂದನ್, ಸಹ ಪ್ರಧಾನ ಕಾರ್ಯದರ್ಶಿ ನಾಗರಾಜು, ಸಲಹಾ ಗೌರವಾಧ್ಯಕ್ಷ ಇಮ್ದಾದ್ ಪಾಷ, ಸಂಘಟನಾ ಕಾರ್ಯದರ್ಶಿ ಅಸ್ವಕ್, ಕಿರಣ ಇತರರಿದ್ದರು.