ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ

 ಚಾಮರಾಜನಗರದ ಸಿಮ್ಸ್ ಕಚೇರಿಯಲ್ಲಿ ಡೀನ್ ಡಾ.ಮಂಜುನಾಥ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು. ಕ್ವಾಲಿಟಿ ನವೀನ್, ಅರ್ಜುನ್, ಹರೀಶ್, ಮಹೇಂದ್ರ, ಮಂಜು, ನಟರಾಜು, ಕುಮಾರ್, ಮಹದೇವಸ್ವಾಮಿ, ವೀರಣ್ಣ, ರಾಜೇಮದ್ರ, ಮನೋಜ್, ಮನು ಇದ್ದರು.
ಚಾಮರಾಜನಗರದ ಸಿಮ್ಸ್ ಕಚೇರಿಯಲ್ಲಿ ಡೀನ್ ಡಾ.ಮಂಜುನಾಥ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು. ಕ್ವಾಲಿಟಿ ನವೀನ್, ಅರ್ಜುನ್, ಹರೀಶ್, ಮಹೇಂದ್ರ, ಮಂಜು, ನಟರಾಜು, ಕುಮಾರ್, ಮಹದೇವಸ್ವಾಮಿ, ವೀರಣ್ಣ, ರಾಜೇಮದ್ರ, ಮನೋಜ್, ಮನು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಮ್ಸ್ ಡೀನ್ ಡಾ.ಮಂಜುನಾಥ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮನವಿ ಸಲ್ಲಿಕೆ
  • ವೈದ್ಯರು ಹಾಜರಾತಿ ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹ
ಚಾಮರಾಜನಗರ: ನಗರದ ಯಡಬೆಟ್ಟದ ಬಳಿ ಇರುವ ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್) ರೋಗಿಗಳಿಗೆ ಸೂಕ್ತ ಸೌಲಭ್ಯ ಮತ್ತು ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮುಖಂಡರು ಡೀನ್ ಡಾ.ಮಂಜುನಾಥ್‌ಗೆ ಮನವಿ ಸಲ್ಲಿಸಿದರು.
ಸಿಮ್ಸ್ ಆಸ್ಪತ್ರೆಗೆ ತೆರಳಿದ ಮುಖಂಡರು ರೋಗಿಗಳ ಬಳಿ ಮಾತನಾಡಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗದೆ ಇರುವ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸಿಮ್ಸ್ ಕಚೇರಿಗೆ ತೆರಳಿ ಡೀನ್ ಡಾ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ನೇಮಕಾತಿ ಮಾಡಿಕೊಳ್ಳಬೇಕು. ವೈದ್ಯಕೀಯ ಉಪಕರಣಗಳಾದ ಎಂಡೋಸ್ಕೋಪಿ ಮತ್ತು ಇತರೆ ಉಪಕರಣಗಳನ್ನು ಬಳಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಂಬುಲೆನ್ಸ್‌ಗಳ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸಕಾಲಕ್ಕೆ ಆಂಬುಲೆನ್ಸ್ ಸೌಲಭ್ಯ ನೀಡಬೇಕು. ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು ರೋಗಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೃದ್ರೋಗ ತಜ್ಞರ ನೇಮಕ ಮಾಡಿಕೊಳ್ಳಬೇಕು. ಗರ್ಭಿಣಿಯರಿಗೆ ಸ್ಕಾೃನಿಂಗ್ ಮಾಡಿಸಲು ಹೊರಗೆ ಕಳುಹಿಸಬಾರದು. ರೋಗಿಗಳಿಗೆ ಔಷಧಿ ಚೀಟಿಯನ್ನು ಹೊರಗೆ ಬರೆಯಬಾರದು. ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ಇದರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಯಾ ದಿನ ನಿಯೋಜನೆಗೊಂಡಿರುವ ವೈದ್ಯರು ಹಾಜರಾತಿ ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್, ಪ್ರಧಾನ ಕಾರ್ಯದರ್ಶಿ ಅರ್ಜುನ್, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್, ಟೌನ್ ಘಟಕದ ಅಧ್ಯಕ್ಷ ಮಹೇಂದ್ರ, ಹೋಬಳಿ ಘಟಕದ ಅಧ್ಯಕ್ಷ ಮಂಜು, ನಟರಾಜು, ಕುಮಾರ್, ಮಹದೇವಸ್ವಾಮಿ, ವೀರಣ್ಣ, ರಾಜೇಮದ್ರ, ಮನೋಜ್, ಮನು ಇದ್ದರು.
ರಾಜ್ಯ ಸರ್ಕಾರ ನಮ್ಮ ಜಿಲ್ಲೆಯ ಆಸ್ಪತ್ರೆಗಾಗಿ ವಿಧಾನಸೌಧ ಮಾದರಿಯ ಕಟ್ಟಡವನ್ನೇ ಕಟ್ಟಿಸಿಕೊಟ್ಟಿದೆ. ಆದರೆ ಸಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಸಕಾಲಕ್ಕೆ ಆಂಬುಲೆನ್ಸ್ ದೊರೆಯುತ್ತಿಲ್ಲ. ಹೃದ್ರೋಗ ಮತ್ತು ನರರೋಗ ತಜ್ಞರಿಲ್ಲ, ಈ ಬಗ್ಗೆ ಸಿಮ್ಸ್ ಡೀನ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು.
ಕ್ವಾಲಿಟಿ, ನವೀನ್, ತಾಲೂಕು ಅಧ್ಯಕ್ಷ, ಕರವೇ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net