ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಬಸ್‌ನಿಲ್ದಾಣದ ರಸ್ತೆಯಲ್ಲಿ ರಾಮಸಮುದ್ರ ನಿವಾಸಿಗಳು ಪ್ರತಿಭಟನೆ ನಡೆಸಿದರು. ಎಂ.ರಾಮಚಂದ್ರ, ಆರ್.ವಿ.ಮಹದೇವಸ್ವಾಮಿ, ರಾಮಸಮುದ್ರ ಶಿವು, ಆರ್.ಪುಟ್ಟಮಲ್ಲಪ್ಪ, ಭೃಂಗೇಶ್, ಆರ್.ಡಿ.ಮಹೇಶ್, ವೇಣುಗೋಪಾಲ್, ಹೇಮಂತ್‌ಕುಮಾರ್ ಇನ್ನಿತರರಿದ್ದರು.
ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಬಸ್‌ನಿಲ್ದಾಣದ ರಸ್ತೆಯಲ್ಲಿ ರಾಮಸಮುದ್ರ ನಿವಾಸಿಗಳು ಪ್ರತಿಭಟನೆ ನಡೆಸಿದರು. ಎಂ.ರಾಮಚಂದ್ರ, ಆರ್.ವಿ.ಮಹದೇವಸ್ವಾಮಿ, ರಾಮಸಮುದ್ರ ಶಿವು, ಆರ್.ಪುಟ್ಟಮಲ್ಲಪ್ಪ, ಭೃಂಗೇಶ್, ಆರ್.ಡಿ.ಮಹೇಶ್, ವೇಣುಗೋಪಾಲ್, ಹೇಮಂತ್‌ಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮಸಮುದ್ರ ನಿವಾಸಿಗಳಿಂದ ಜೋಡಿರಸ್ತೆಯಲ್ಲಿ ಧರಣಿ
  • 5 ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮಸ್ಯೆ
  • ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಕೆ
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ರಾಮಸಮುದ್ರ ಬಡಾವಣೆಯ 5 ವಾರ್ಡ್‌ಗಳಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಚರಂಡಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ರಾಮಸಮುದ್ರ ಬಡಾವಣೆಯ ಬಸ್‌ನಿಲ್ದಾಣದ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಖಾಲಿ ಬಿಂದಿಗೆ ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ನಗರಸಭೆ, ಶಾಸಕರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ರಾಮಸಮುದ್ರ ಬಡಾವಣೆಯ 5 ವಾರ್ಡ್‌ಗಳಲ್ಲೂ ಕಳೆದ ಎರಡು ತಿಂಗಳಿನಿಂದಲೂ ಕುಡಿಯುವ ನೀರು ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಯಾವುದೇ ಬೋರ್‌ವೆಲ್ ದುರಸ್ಥಿ ಪಡಿಸದೇ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿ 4 ವರ್ಷಗಳು ಕಳೆದರೂ ಕೂಡ, ಸಮರ್ಪಕವಾಗಿ ರಸ್ತೆ ಕಾಮಗಾರಿ ನಡೆಸದೇ ಬಹಳಷ್ಟು ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ರಾಮಸಮುದ್ರದ ಪೌರಕಾರ್ಮಿಕರ ಕಾಲೋನಿ ಹತ್ತಿರ ಒಳಚರಂಡಿಯು ಬ್ಲಾಕ್ ಆಗಿ ಒಳಚರಂಡಿಯ ನೀರು ರಸ್ತೆಯ ಮೇಲೆ ಬಂದು ಅವ್ಯವಸ್ಥೆ ತಾಂಡವವಾಡುತ್ತಿದೆ. ಮಲೀನವಾದ ನೀರಿನಿಂದ ಅಲ್ಲಿನ ನಿವಾಸಿಗಳು ವಾಸಿಸಲು ತುಂಬಾ ತೊಂದರೆಯಾಗಿರುತ್ತದೆ. ರಾಮಸಮುದ್ರದ ಬಡಾವಣೆಯ ದುರ್ಗಿಗುಡಿ ಬೀದಿ, ಹಳ್ಳದಬೀದಿ, ಕುರುಬರ ಬೀದಿ, ಆದಿಜಾಂಬವರ ಬೀದಿ, ನಾಯಕರ ಬೀದಿ, ಕೋಟೆಬೀದಿ, ಅಂಬೇಡ್ಕರ್ ಬಡಾವಣೆ, ಚಿಕ್ಕಹೊಸ ಬಡಾವಣೆ ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ಆರ್.ವಿ.ಮಹದೇವಸ್ವಾಮಿ ಮಾತನಾಡಿ, ರಾಮಸಮುದ್ರ ಬಡಾವಣೆಯ 5 ವಾರ್ಡ್‌ಗಳಲ್ಲೂ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ನಗರೋತ್ಥಾನ ಯೋಜನೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಮಸಮುದ್ರ ಶಿವು, ಆರ್.ಪುಟ್ಟಮಲ್ಲಪ್ಪ, ಭೃಂಗೇಶ್, ಆರ್.ಡಿ.ಮಹೇಶ್, ವೇಣುಗೋಪಾಲ್, ಹೇಮಂತ್‌ಕುಮಾರ್, ಗಿರೀಶ್, ಕುಮಾರ್, ನವೀನ್, ಸೋಮಣ್ಣ, ಚಿನ್ನಸ್ವಾಮಿ, ಮಹದೇವಯ್ಯ, ಹೋಟೆಲ್ ಪುಟ್ಟಣ್ಣ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net