ಏತ ನೀರಾವರಿ ಯೋಜನೆ ರೂಪಿಸಲು ಆಗ್ರಹ

ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವಡಕೆಹಳ್ಳದಲ್ಲಿ ರೈತರು ಕೈಗೊಂಡಿರುವ ಆಹೋರಾತ್ರಿ ಧರಣಿಗೆ ಗ್ರಾಮದ ಯುವಕರು ಬೆಂಬಲ ಸೂಚಿಸಿದರು. ಮುಖಂಡರಾದ ಅರ್ಪುದರಾಜ್, ದಿನೇಶ್, ಪೆರಿಯ ನಾಯಗಂ, ಇನ್ನಾಸಿ ಮತ್ತಿತರರಿದ್ದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವಡಕೆಹಳ್ಳದಲ್ಲಿ ರೈತರು ಕೈಗೊಂಡಿರುವ ಆಹೋರಾತ್ರಿ ಧರಣಿಗೆ ಗ್ರಾಮದ ಯುವಕರು ಬೆಂಬಲ ಸೂಚಿಸಿದರು. ಮುಖಂಡರಾದ ಅರ್ಪುದರಾಜ್, ದಿನೇಶ್, ಪೆರಿಯ ನಾಯಗಂ, ಇನ್ನಾಸಿ ಮತ್ತಿತರರಿದ್ದರು.
Published on
ಹನೂರು : ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 63 ದಿನಗಳಿಂದ ರೈತರು ಕೈಗೊಂಡಿರುವ ಆಹೋ ರಾತ್ರಿ ಧರಣಿಗೆ ಭಾನುವಾರ ಗ್ರಾಮದ ಯುವಕರು ಬೆಂಬಲ ಸೂಚಿಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ಕಳೆದ 63 ದಿನಗಳಿಂದ ರೈತರು ಆಹೋ ರಾತ್ರಿ ಧರಣಿ ಕೈಗೊಂಡಿದ್ದಾರೆ. ಇದಕ್ಕೆ ರೈತರು, ಧರ್ಮಗುರುಗಳು, ಮಹಿಳೆಯರು ಸೇರಿದಂತೆ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ. ಈ ಹಿನ್ನ್ನೆಲೆಯಲ್ಲಿ ಭಾನುವಾರ ವಡಕೆಹಳ್ಳದ ಯುವಕರು ಧರಣಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಯುವ ಮುಖಂಡ ದಿನೇಶ್ ಮಾತನಾಡಿ, ರೈತರು ಅಂತರ್ಜಲ ಅಭಿವೃದ್ಧಿಗಾಗಿ ಏತ ನೀರಾವರಿ ಯೋಜನೆ ರೂಪಿಸುವಂತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಬೇಡಿಕೆ ಈಡೇರದಿರುವುದು ನಿಜಕ್ಕೂ ವಿಪರ್ಯಾಸ. ಇದರಿಂದ ರೈತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಯುವ ಮುಖಂಡರಾದ ಪೆರಿಯ ನಾಯಗಂ, ಇನ್ನಾಸಿ, ಆಲ್ಫೀನ್, ಆನಂದ್, ಅಭಿಲಾಷ್, ಚಾರ್ಲೆಸ್, ರಾಹುಲ್, ಇರುದಿಯಾ ಶರ್ಮ, ರಾಬರ್ಟ್, ಮಂಜುನಾಥ್, ಪುಟ್ಟಸ್ವಾಮಿ, ಸೆಲ್ವರಾಜ್, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net